ಬೆಂಗಳೂರು [ಸೆ.18]:  ನೈಜೀರಿಯಾದ ‘ಗುಸೌ ಇನ್ಸ್‌ಟಿಟ್ಯೂಟ್‌’ ಏರ್ಪಡಿಸಿರುವ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ರಾಜ್ಯದ ರೈಲ್ವೆ ಐಜಿಪಿ ಡಿ.ರೂಪಾ ಅವರು ಪಾಲ್ಗೊಳ್ಳಲಿದ್ದಾರೆ. ನೈಜೀರಿಯಾಕ್ಕೆ ಅಧಿಕೃತ ಆಹ್ವಾನ ಪಡೆದು ತೆರಳುತ್ತಿರುವ ರಾಜ್ಯದ ಮೊದಲ ಪೊಲೀಸ್‌ ಅಧಿಕಾರಿ ರೂಪಾ ಆಗಿದ್ದಾರೆ.

ನೈಜೀರಿಯಾದ ಅಬುಜದ ಶೆರಟನ್‌ ಹೋಟೆಲ್‌ನಲ್ಲಿ ಸೆ.19ರಂದು ಸಂವಾದ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ತಜ್ಞರು, ಉದ್ಯಮಿಗಳು ಭಾವಹಿಸಲಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳುವ ರೂಪಾ ಅವರು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ನಾಯಕತ್ವ, ಪಾತ್ರ ಹಾಗೂ ಆಡಳಿತದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೆ, ಪೊಲೀಸ್‌ ಇಲಾಖೆಯಲ್ಲಿನ ವ್ಯವಸ್ಥೆ ಹಾಗೂ ತಮ್ಮ ಅನುಭವದ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.