ಪಿಗ್ಗಿ ಭಾವಿ ಪತಿ ಮಾಜಿ ಗೆಳತಿ ಮಿಸ್ ಯೂನಿವರ್ಸ್ ಒಲಿವಿಯಾ ಹೇಳಿದ್ದೇನು..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Sep 2018, 1:24 PM IST
Nicks Ex GirlFriend Olivia Culpo Breaks Her Silence
Highlights

ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕನ್ ಸಿಂಗರ್ ನಿಕ್ ಜೋನಾಸ್ ಸಂಬಂಧ ಇದೀಗ ಮದುವೆ ವರೆಗೂ ಕೂಡ ಬಂದು ನಿಂತಿದೆ. ಇದೇ ಸಂದರ್ಭದಲ್ಲಿ ನಿಕ್  ಮಾಜಿ ಗೆಳತಿ ತಮ್ಮ ಮೌನ ಮುರಿದಿದ್ದಾರೆ. 

ವಾಷಿಂಗ್ಟನ್ : ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮರಿಕನ್ ಸಿಂಗರ್ ನಿಕ್ ಜೋನಾಸ್ ನಿಶ್ಚಿತಾರ್ಥ ಈಗಾಗಲೆ ನಡೆದಿದ್ದು, ಸದ್ಯ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದ್ದು ಶೀಘ್ರದಲ್ಲೇ ಈ ಜೋಡಿ  ಹಸೆಮಣೆ ಏರಲೂ ಕೂಡ ಸಜ್ಜಾಗಿದೆ. 

ಆದರೆ ಇದೀಗ ನಿಕ್ ಜೋನಾಸ್ ಮಾಜಿ ಗೆಳತಿ ಇವರಿಬ್ಬರ ಸಂಬಂಧದ ಬಗ್ಗೆ ತನ್ನ ಮೌನ ಮುರಿದಿದ್ದಾರೆ.  

ಮಿಸ್ ಯೂನಿವರ್ಸ್ 2012 ಆಗಿರುವ ಒಲಿವಿಯಾ ಕುಲ್ಪೊ ಇಬ್ಬರ ಬಗ್ಗೆ ಪ್ರೀತಿ ಬಗ್ಗೆ ಮಾತನಾಡಿದ್ದು, ಯಾರೂ ಯಾವುದೇ ಸಂದರ್ಭದಲ್ಲಿ ಪ್ರೀತಿಯನ್ನು ಕಂಡುಕೊಳ್ಳಬಹುದು . ಅದರಲ್ಲೂ ಸಿನಿಮಾ ಜಗತ್ತಿನಲ್ಲಿ. ನಿಕ್ ಇದೀಗ ಹೊಸ ಸಂಬಂಧ ಕಂಡುಕೊಂಡಿದ್ದು ಈ ಬಗ್ಗೆ ತಮಗೆ ಅತ್ಯಂತ ಸಂತೋಷವಿದೆ. ಅವರಿಬ್ಬರ ಜೀವನ ಸಂತೋಷದಿಂದ ಕೂಡಿರಲಿ ಎಂದು ಹೇಳಿದ್ದಾರೆ. 

ಅಮೆರಿಕನ್ ಮಾಡೆಲ್ ಹಾಗೂ ಸಿಂಗರ್ ಆಗಿದ್ದ ಒಲಿವಿಯಾ 2012ರಲ್ಲಿ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದರು. ಇಬ್ಬರ 2 ವರ್ಷಗಳ ಡೇಟಿಂಗ್ ಬಳಿಕ 2015ರಲ್ಲಿ ನಿಕ್ ಜೊತೆ  ಒಲಿವಿಯಾ ಸಂಬಂಧ ಮುರಿದು ಬಿದ್ದಿತ್ತು. 

ಸದ್ಯ ಒಲಿವಿಯಾ, ಡ್ಯಾನಿ ಅಮೆಂಡೋಲಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

loader