Asianet Suvarna News Asianet Suvarna News

ಚೀನಾಗೆ ಟಾಂಗ್ ಕೊಟ್ಟ ಭಾರತ

ಪಠಾಣ್ ಕೋಟ್ ಸೇನಾನೆಲೆ ಮೇಲಿನ ದಾಳಿ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ಉಗ್ರ ಮಸೂದ್ ಅಜರ್ ಸೇರಿದಂತೆ ಆತನ  ಸಹೋದರ ಅಬ್ದುಲ್ ರಾಫ್, ಇತರೆ ಇಬ್ಬರು ಉಗ್ರರ ವಿರುದ್ಧ ಚಾರ್ಜ್ ಶೀಟ್ ದಾಖಲು ಮಾಡಿದೆ.

NIA mulls chargesheet against Masood Azhar in Pathankot terror attack
  • Facebook
  • Twitter
  • Whatsapp

ನವದೆಹಲಿ(ಅ.14): ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕು ಎನ್ನುವ ನಿಲುವಿಗೆ ಅಡ್ಡಿಯಾಗಿರುವ ಚೀನಾಗೆ  ಟಾಂಗ್ ನೀಡಿರುವ ಭಾರತ ಪಠಾಣ್ ಕೋಟ್ ಉಗ್ರ ದಾಳಿ ಪ್ರಕರಣ ಸಂಬಂಧ ಚಾರ್ಜ್ ಶೀಟ್ ದಾಖಲು ಮಾಡಿದೆ. ಪಠಾಣ್ ಕೋಟ್ ಸೇನಾನೆಲೆ ಮೇಲಿನ ದಾಳಿ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ಉಗ್ರ ಮಸೂದ್ ಅಜರ್ ಸೇರಿದಂತೆ ಆತನ  ಸಹೋದರ ಅಬ್ದುಲ್ ರಾಫ್, ಇತರೆ ಇಬ್ಬರು ಉಗ್ರರ ವಿರುದ್ಧ ಚಾರ್ಜ್ ಶೀಟ್ ದಾಖಲು ಮಾಡಿದೆ. ಇನ್ನು ಎನ್ ಐಎ ದಾಖಲಿಸಿರುವ ಚಾರ್ಜ್ ಶೀಟ್ ನಲ್ಲಿರುವ ಇತರೆ ಇಬ್ಬರು ಉಗ್ರಗಾಮಿಗಳು  ಕೂಡ ಪಾಕಿಸ್ತಾನ ಮೂಲದವರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios