Asianet Suvarna News Asianet Suvarna News

ತ್ಯಾಜ್ಯ ವಿಲೇವಾರಿ ಪ್ರಕರಣ: ಬಿಬಿಎಂಪಿಗೆ 5 ಕೋಟಿ ದಂಡ!

ಕಸದ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಗೆ ಬೃಹತ್ ಮೊತ್ತದ ದಂಡ! ಇತಿಹಾಸದಲ್ಲಿ ಅತೀ ದೊಡ್ಡ ಪ್ರಮಾಣದ ದಂಡ ಪಾವತಿಸಬೇಕು ಬಿಬಿಎಂಪಿ! 5 ಕೋಟಿ ದಂಡ ಪಾವತಿಸುವ ಮಟ್ಟಕ್ಕೆ ತಂದುಕೊಂಡ ಬಿಬಿಎಂಪಿ! ಬಿಬಿಎಂಪಿಗೆ 5 ಕೋಟಿ ದಂಡ ವಿಧಿಸಿ ಹಸಿರು ನ್ಯಾಯಾಧೀಕರಣ ಆದೇಶ! ಕಸದ ಕ್ವಾರಿಗಳ ಅಸಮರ್ಪಕ ನಿರ್ವಹಣೆ ಹಿನ್ನಲೆಯಲ್ಲಿ ಬಿಬಿಎಂಪಿಗೆ ದಂಡ

ನವದೆಹಲಿ(ಅ.25): ಬಾಗಲೂರಿನ ಕ್ವಾರಿಗಳಲ್ಲಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ. ಬಿಎಂಪಿಗೆ 5 ಕೋಟಿ ರೂ. ದಂಡ ಹಾಕಿದೆ. ಕ್ವಾರಿಗಳಲ್ಲಿನ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿ ಮಾಡಬೇಕು ಎಂಬ ಹಸಿರು‌ ನ್ಯಾಯಾಧಿಕರಣದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಈ ದಂಡ ವಿಧಿಸಲಾಗಿದೆ. ಒಂದು ತಿಂಗಳೊಳಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದಂಡ ಪಾವತಿಸುವಂತೆ ಸೂಚನೆ ಕೂಡ ನೀಡಿದೆ. ಅಲ್ಲದೇ  ದಂಡದ ಹಣವನ್ನು ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳಿಂದ ವಸೂಲಿ ಮಾಡುವಂತೆ ಸೂಚಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..