ಸಂಸತ್ ನಲ್ಲಿ ಎದೆ ಹಾಲುಣಿಸಿ ಅನೇಕ ಮಹಿಳೆಯರು ದಾಖಲೆ ಬರೆದಿದ್ದರು. ಪ್ರಪಂಚದ ಮೂಲೆ ಮೂಲೆಗಳಿಂದ ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಜತೆಗೆ ಹಾಲುಣಿಸುವುದರ ಜಾಗೃತಿಗೂ ಇದನ್ನು ಬಳಸಿಕೊಳ್ಳಲಾಗಿತ್ತು.ಈಗ ಅಂಥದ್ದೇ ಒಂದು ವಿಶೇಷ ಸುದ್ದಿ ಇಲ್ಲಿದೆ.
ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಅಡ್ರೇನ್ ಹೊಸ ಇತಿಹಾಸವನ್ನೇ ನಿರ್ಮಾಣ ಮಾಡಿದ್ದಾರೆ. ತಮ್ಮ ಮೂರು ತಿಂಗಳ ಮಗುವಿನೊಂದಿಗೆ ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿಗೆ ಆಗಮಿಸಿ ಪ್ರಪಂಚದ ಗಮನ ಸೆಳೆದಿದ್ದಾರೆ.
ಮೂರು ತಿಂಗಳ ಪುಟ್ಟ ಮಗು ನೀವೆ ಟೆ ಅರೋಹಾ ಸಹ ಯುಎಸ್ ಜನರಲ್ ಅಸೆಂಬ್ಲಿ ಕಣ್ಣು ತುಂಬಿಕೊಂಡಿದೆ.
ಅಡ್ರೇನ್ ಅವರ ಸಂಗಾತಿ ಗೆಫೋರ್ಡ್ ಸಹ ಮಗುವಿನ ಪಾಲನೆಯಲ್ಲಿ ಸಾಥ್ ನೀಡಿದ್ದಾರೆ. ಟಿವಿ ನಿರೂಪಕರಾಗಿರುವ ಗೆಫೋರ್ಡ್ ಅಡ್ರೇನ್ ಜತೆ ನ್ಯೂಯಾರ್ಕ್ ಗೆ ಬಂದಿದ್ದಾರೆ. ವಿಶ್ವದಲ್ಲಿ ಶೇ. 5ರಷ್ಟು ಜನ ಮಾತ್ರ ಮಹಿಳಾ ಆಡಳಿತಗಾರರಿದ್ದಾರೆ. ನೀವು ಮಗುವಿನ ತುಂಟಾಟದೊಂದಿಗೆ ಖುಷಿಯಲ್ಲಿ ಪಾಲ್ಗೊಳ್ಳಿ..
