ಸಾಕ್ಷಿ ಹೇಳಿಕೆ ಪ್ರಕಾರ ಸೀಲಿಂಗ್​ ಫ್ಯಾನ್​ನಿಂದ ಇಳಿಸುವಾಗ ಬೆರಳಚ್ಚು ತೆಗೆದಿಲ್ಲ. ಶವವಿದ್ದ ಕೋಣೆಯ ಡೋರ್​ ಲಾಕ್​ ಓಪನ್​ ಆಗಿತ್ತು. ಬುಲೆಟ್​ ಗುರುತುಗಳು ಇತ್ತು. ಖಾಲಿ ಹಾಳೆಗೆ ನಾನು ಸಹಿ ಹಾಕಿದೆ ಎಂದು ಸಾಕ್ಷಿಯೊಬ್ಬರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದು, ಸಾವಿನ ತನಿಖೆ ವೇಳೆ ಸಿಐಡಿಯಿಂದ ಕರ್ತವ್ಯಲೋಪವಾಗಿದೆ ಎಂದು ಟೈಮ್ಸ್ ನೌ ವರದಿಯಲ್ಲಿ ತಿಳಿಸಿದೆ.

ಬೆಂಗಳೂರು(ಆ,23): ಡಿವೈಎಸ್ಪಿ ಗಣಪತಿ ಸಾವಿಗೆ ಈಗ ಸ್ಫೋಟಕ ತಿರುವು ಸಿಕ್ಕಿದ್ದು, ಫಾರೆನಿಕ್ಸ್ ವರದಿಯಲ್ಲಿ ಸಾವಿನ ಒಳವರ್ಮ ಬಯಲಾಗಿದೆ.

ರಾಷ್ಟ್ರೀಯ ವಾಹಿನಿ ಟೈಮ್ಸ್ ನೌನಿಂದ ಸಾವಿನ ತನಿಖೆಯ ಬಗ್ಗೆ ವರದಿ ನೀಡಿದ್ದು, 2500 ಫೋಟೋ, 57 ಮೆಸೇಜ್'ಗಳು, 100 ಇ-ಮೇಲ್'ಗಳು ನಾಶವಾಗಿವೆ. ಜೊತೆಗೆ 145ಕ್ಕೂ ಹೆಚ್ಚು ಪ್ರಮುಖ ದಾಖಲೆಯ ಪಿಡಿಎಫ್ ಫೈಲ್ ನಾಶವಾಗಿದೆ. ಇದೆಲ್ಲಾ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲದೆ ಮಾಜಿ ಸಚಿವರು, ಶಾಸಕರಿಗೆ ಸಂಬಂಧಿಸಿದ ದಾಖಲೆಗಳು ಸಹ ಅಳಿಸಿ ಹೋಗಿದೆ. ಸಾಕ್ಷಿ ನಾಶದ ಹಿಂದೆ ಕೇಂದ್ರ ಸಚಿವರ ಸಂಬಂಧಿಕೊಬ್ಬರ ದೂರವಾಣಿ ಸಂಖ್ಯೆಯನ್ನು ನಾಶವಾಗಿದೆ ಎಂದು ವರದಿ ನೀಡಿದೆ.

ಸಾಕ್ಷಿಯೊಬ್ಬರಿಂದ ಖಾಲಿ ಪತ್ರಕ್ಕೆ ಸಹಿ