ಪ್ರಯಾಣ ದೂರಕ್ಕೆ ಅನುಗುಣವಾಗಿ ಟೋಲ್ ದರ

First Published 3, Feb 2018, 9:07 AM IST
New Toll System
Highlights

ಹೆದ್ದಾರಿಗಳಲ್ಲಿ ಇನ್ನು ಟೋಲ್ ರಸ್ತೆಗೆ ನಿಗದಿಯಾದ ಹಣ ನೀಡಬೇಕಾಗಿಲ್ಲ. ಬದಲಾಗಿ ಸಂಚರಿಸಿದ ದೂರಕ್ಕೆ ಅನುಗುಣವಾಗಿ ಟೋಲ್ ಸಂಗ್ರಹಿಸಲಾಗುತ್ತದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಮಂಡಿಸಿದ ಬಜೆಟ್ ನಲ್ಲಿ, ‘ಬಳಸಿದ್ದಕ್ಕಷ್ಟೇ ಟೋಲ್’ ಎಂಬ ಹೊಸ ನೀತಿಯೊಂದನ್ನು ಜಾರಿಗೆ ತರುತ್ತಿರುವುದಾಗಿ ತಿಳಿಸಿದ್ದಾರೆ.

ನವದೆಹಲಿ: ಹೆದ್ದಾರಿಗಳಲ್ಲಿ ಇನ್ನು ಟೋಲ್ ರಸ್ತೆಗೆ ನಿಗದಿಯಾದ ಹಣ ನೀಡಬೇಕಾಗಿಲ್ಲ. ಬದಲಾಗಿ ಸಂಚರಿಸಿದ ದೂರಕ್ಕೆ ಅನುಗುಣವಾಗಿ ಟೋಲ್ ಸಂಗ್ರಹಿಸಲಾಗುತ್ತದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಮಂಡಿಸಿದ ಬಜೆಟ್ ನಲ್ಲಿ, ‘ಬಳಸಿದ್ದಕ್ಕಷ್ಟೇ ಟೋಲ್’ ಎಂಬ ಹೊಸ ನೀತಿಯೊಂದನ್ನು ಜಾರಿಗೆ ತರುತ್ತಿರುವುದಾಗಿ ತಿಳಿಸಿದ್ದಾರೆ.

ಈಗಿರುವ ಮುಕ್ತ ಟೋಲ್ ವ್ಯವಸ್ಥೆ ಯಲ್ಲಿ ವಾಹನ ಸವಾರರು ಟೋಲ್ ರಸ್ತೆಯನ್ನು ಬಳಸಿದ ಮಾತ್ರಕ್ಕೆ ನಿಗದಿ ಪಡಿಸಿದ ಹಣ ಪಾವತಿ ಸಬೇಕಿತ್ತು.

ಹರ್ಯಾಣ ಮತ್ತು ಉತ್ತರ ಪ್ರದೇಶದ ಪಶ್ಚಿಮ ಹೊರ ಹೆದ್ದಾರಿಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.

loader