ಹೊಸ ಆರ್ಥಿಕ ವರ್ಷ ಇಂದಿನಿಂದ ಆರಂಭ, ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಬಜೆಟ್​'ನ ಹಲವಾರು ಘೋಷಣೆಗಳೂ ಜಾರಿಗೆ ಬರಲಿವೆ. ಇದರ ಪ್ರಕಾರ ಕೆಲವೊಂದಿಷ್ಟು ವಸ್ತುಗಳು ಅಗ್ಗ. ದುಬಾರಿ ಆಗಲಿವೆ. ಇದರ ಜೊತೆಯಲ್ಲಿ ಇಂದಿನಿಂದ ಕೆಲ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಇದೆಲ್ಲದರ ಒಂದು ಸ್ಪೆಷಲ್ ರಿಪೋರ್ಟ್​ ಇಲ್ಲಿದೆ.

ನವದೆಹಲಿ(.01): ಹೊಸ ಆರ್ಥಿಕ ವರ್ಷ ಇಂದಿನಿಂದ ಆರಂಭ, ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಬಜೆಟ್​'ನ ಹಲವಾರು ಘೋಷಣೆಗಳೂ ಜಾರಿಗೆ ಬರಲಿವೆ. ಇದರ ಪ್ರಕಾರ ಕೆಲವೊಂದಿಷ್ಟು ವಸ್ತುಗಳು ಅಗ್ಗ. ದುಬಾರಿ ಆಗಲಿವೆ. ಇದರ ಜೊತೆಯಲ್ಲಿ ಇಂದಿನಿಂದ ಕೆಲ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಇದೆಲ್ಲದರ ಒಂದು ಸ್ಪೆಷಲ್ ರಿಪೋರ್ಟ್​ ಇಲ್ಲಿದೆ.

ಯಾವುದು ಅಗ್ಗ?

ದೇಶಿ ವಾಟರ್ ಫಿಲ್ಟರ್, ಚರ್ಮೋತ್ಪನ್ನ, ಸೋಲಾರ್

ಡೆಬಿಟ್​-ಕ್ರೆಡಿಟ್​ ಕಾರ್ಡ್​ ಸ್ವೈಪಿಂಗ್​ ಯಂತ್ರಗಳು

ಐರ್ಸಿಟಿಸಿಯಿಂದ ಬುಕ್​ ಅಗುವ ಅನ್​ಲೈನ್​ ಟಿಕೆಟ್

ಯಾವುದು ದುಬಾರಿ?

ಬ್ಯಾಂಕ್​ಗಳಲ್ಲಿ ನಗದು ವಹಿವಾಟು, ಸೇವಾ ಶುಲ್ಕ ದುಬಾರಿ

ವಿದೇಶಿ ಸರ್ಕೀಟ್​ ಬೋರ್ಡ್​ ಇರುವ ಮೊಬೈಲ್​ ಫೋನ್​

ದೇಶಿಯವಾಗಿ ಉತ್ಪಾದನೆಯಾಗುವ ಎಲ್​ಇಡಿ ಬಲ್ಬ್​ಗಳು

ಸಿಗರೇಟ್, ತಂಬಾಕು, ಬೀಡಿ, ಆಮದು ಗೋಡಂಬಿ

ಶೇ.99.9 ಶುದ್ಧತೆಯ ಚಿನ್ನ-ಬೆಳ್ಳಿ ನಾಣ್ಯ

ವಾಹನ, ಆರೋಗ್ಯ ವಿಮೆ ಶೇ.5ರಷ್ಟು ದುಬಾರಿ

ನಗದು ವ್ಯವಹಾರ 2 ಲಕ್ಷ ಗಡಿ ದಾಟಿದ್ರೆ ದಂಡ: ಹಳೇ ನೋಟು ಪತ್ತೆಯಾದ್ರೆ 10 ಪಟ್ಟು ದಂಡ

ಇನ್ನೂ ಇತ್ತೀಚೆಗೆ ಅಂಗೀಕರಿಸಿದ ಹಣಕಾಸು ಮಸೂದೆ ಪ್ರಕಾರ ಇಂದಿನಿಂದ ನಗದು ವಹಿವಾಟಿನ ಮಿತಿ 2 ಲಕ್ಷ ಮೀರುವಂತಿಲ್ಲ. ಈ ನಿಯಮ ಉಲ್ಲಂಘಿಸಿ ವ್ಯವಹಾರ ನಡೆಸಿದ್ರೆ ವ್ಯವಹಾರ ನಡೆಸಿದ ಮೊತ್ತದಷ್ಟೇ ದಂಡ ಕಟ್ಟಬೇಕಾಗುತ್ತೆ. ಹಾಗೇನೆ ಹಳೇ 500 ಹಾಗೂ ಸಾವಿರ ಮುಖ ಬೆಲೆ ನೋಟು ಯಾರು ಇಟ್ಟುಕೊಳ್ಳುವಂತಿಲ್ಲ. ಬದಲಾಯಿಸಲು ಅವಕಾಶವಿಲ್ಲ,. ಹಾಗೇನಾದ್ರೂ ನೋಟು ಪತ್ತೆಯಾದ್ರೆ ಹಣದ 10 ಪಟ್ಟು ದಂಡ ಕಟ್ಟಬೇಕಾಗುತ್ತದೆ