Asianet Suvarna News Asianet Suvarna News

2017ರಿಂದ ಎಟಿಎಂ ಕಾರ್ಡ್ ವ್ಯವಹಾರಕ್ಕೆ ಕಣ್ಣು, ಬೆರಳಚ್ಚು ದೃಢೀಕರಣ

32 ಲಕ್ಷಕ್ಕೂ ಅಧಿಕ ಡೆಬಿಟ್‌ ಕಾರ್ಡ್‌ಗಳ ಹ್ಯಾಂಕ್​​ ಮಾಡಲಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದ ನಂತರ ಎಚ್ಚೆತ್ತ ಆರ್​ಬಿಐ, ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಗ್ರಾಹಕರ ಹಣಕ್ಕೆ ಸುರಕ್ಷೆ ಕಲ್ಪಿಸುವ ನಿಟ್ಟಿನಲ್ಲಿ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳ ವ್ಯವಹಾರದ ವೇಳೆ ಗುರುತಿನ ದೃಢೀಕರಣಕ್ಕಾಗಿ ಕಣ್ಣು ಅಥವಾ ಬೆರಳನ್ನೇ ಬಳಸುವ ಸೌಲಭ್ಯ ಜಾರಿಗೆ ಬರಲಿದೆ.

New Rule For ATM Transaction

ನವದೆಹಲಿ(ಅ.27): 32 ಲಕ್ಷಕ್ಕೂ ಅಧಿಕ ಡೆಬಿಟ್‌ ಕಾರ್ಡ್‌ಗಳ ಹ್ಯಾಂಕ್​​ ಮಾಡಲಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದ ನಂತರ ಎಚ್ಚೆತ್ತ ಆರ್​ಬಿಐ, ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಗ್ರಾಹಕರ ಹಣಕ್ಕೆ ಸುರಕ್ಷೆ ಕಲ್ಪಿಸುವ ನಿಟ್ಟಿನಲ್ಲಿ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳ ವ್ಯವಹಾರದ ವೇಳೆ ಗುರುತಿನ ದೃಢೀಕರಣಕ್ಕಾಗಿ ಕಣ್ಣು ಅಥವಾ ಬೆರಳನ್ನೇ ಬಳಸುವ ಸೌಲಭ್ಯ ಜಾರಿಗೆ ಬರಲಿದೆ.

ಮುಂದಿನ ವರ್ಷದ ಜನವರಿ 1ರಿಂದಲೇ ಈ ಯೋಜನೆ ಜಾರಿಗೆ ಬರುವ ನಿರೀಕ್ಷೆ ಇದೆ. ಹೊಸ ಎಟಿಎಂಗಳು ಮತ್ತು ಪಿಒಎಸ್‌ ಟರ್ಮಿನಲ್‌ಗಳಲ್ಲಿ  ಈ ಸೇವೆ ದೊರೆಯಲಿದೆ. ಎಟಿಎಂ ಯಂತ್ರವು ಗ್ರಾಹಕರ ಕಣ್ಣಿನ ರೆಟಿನಾ ಅಥವಾ ಬೆರಳಚ್ಚನ್ನು ಸ್ಕ್ಯಾ‌ನ್‌ ಮಾಡಿ, ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ವ್ಯವಹಾರವನ್ನು ದೃಢೀಕರಿಸಲಿದೆ. ಇದರಿಂದ ಕಾರ್ಡ್‌ಗಳ ದುರ್ಬಳಕೆ ತಪ್ಪಲಿದೆ. ಈ ಸೇವೆ ಪಡೆಯಲು ಆಧಾರ್‌ ಆಧಾರಿತ ಬಯೋಮೆಟ್ರಿಕ್‌ ಮಾಹಿತಿ ಅಗತ್ಯ.

ಇಂಥ ಸೌಲಭ್ಯವನ್ನು ಒದಗಿಸುವಂತೆ ಆರ್‌ಬಿಐ , ಪ್ರಾಂತೀಯ ಗ್ರಾಮೀಣ ಬ್ಯಾಂಕ್‌ಗಳು, ಎಲ್ಲ ಕೋ-ಆಪರೇಟೀವ್‌ ಬ್ಯಾಂಕ್‌ಗಳು, ಕಾರ್ಡ್‌ ಪೇಮೆಂಟ್‌ ನೆಟ್‌ವರ್ಕ್‌ಗಳು, ಎಟಿಎಂ ಆಪರೇಟರ್‌ಗಳು, ಪೇಮೆಂಟ್‌ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳು ಸೇರಿದಂತೆ ಎಲ್ಲ ಶೆಡ್ಯೂಲ್ಡ್‌ ವಾಣಿಜ್ಯ ಬ್ಯಾಂಕ್‌ಗಳಿಗೆ ಅನ್ವಯವಾಗುವಂತೆ ಸುತ್ತೋಲೆ ಹೊರಡಿಸಿದೆ.

Latest Videos
Follow Us:
Download App:
  • android
  • ios