ಕೇಂದ್ರ ನೌಕರರು ನಿವೃತ್ತರಾದ ಬಳಿಕ ಅವರನ್ನು ಕೆಲವೊಂದು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸರ್ಕಾರದ ಕೆಲವು ಮಹತ್ವದ ಯೋಜನೆಗಳ ಜಾರಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ನವದೆಹಲಿ(ಜ.11) ಕೇಂದ್ರ ನೌಕರರು ನಿವೃತ್ತರಾದ ಬಳಿಕ ಅವರನ್ನು ಕೆಲವೊಂದು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸರ್ಕಾರದ ಕೆಲವು ಮಹತ್ವದ ಯೋಜನೆಗಳ ಜಾರಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸರ್ಕಾರಿ ನೌಕರರು 60ರ ಹರೆಯದಲ್ಲಿ ನಿವೃತ್ತರಾಗುತ್ತಾರೆ. ಆ ಹರೆಯದಲ್ಲಿ ಅವರು ಅನುಭವಸ್ಥರೂ, ಸಾಮರ್ಥ್ಯವಂತರೂ, ಶಕ್ತಿವಂತರೂ ಆಗಿದ್ದಾಗ, ಅವರನ್ನು ಹೊಸ ಕಾರ್ಯ ಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ಜೀವನದಲ್ಲಿ ಅವರಿಗೆ ಹೊಸ ಇನ್ನಿಂಗ್ಸ್ ಆರಂಭಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.