ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳ ಹವಾನಿಯಂತ್ರಿತ ಬೋಗಿಗಳಲ್ಲಿ ಕಾಯ್ದಿರಿಸಿದ ಸೀಟುಗಳು ಖಚಿತವಾಗದೇ ಇದ್ದರೆ, ನಿಗದಿತ ಸ್ಥಳಕ್ಕೆ ಏರ್ ಇಂಡಿಯಾ ವಿಮಾನದ ಮೂಲಕ ಪ್ರಯಾಣಿಸುವ ಆಯ್ಕೆ ಶೀಘ್ರವೇ ಲಭ್ಯವಾಗಲಿದೆ.

ನವದೆಹಲಿ: ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳ ಹವಾನಿಯಂತ್ರಿತ ಬೋಗಿಗಳಲ್ಲಿ ಕಾಯ್ದಿರಿಸಿದ ಸೀಟುಗಳು ಖಚಿತವಾಗದೇ ಇದ್ದರೆ, ನಿಗದಿತ ಸ್ಥಳಕ್ಕೆ ಏರ್ ಇಂಡಿಯಾ ವಿಮಾನದ ಮೂಲಕ ಪ್ರಯಾಣಿಸುವ ಆಯ್ಕೆ ಶೀಘ್ರವೇ ಲಭ್ಯವಾಗಲಿದೆ.

ಏರ್ ಇಂಡಿಯಾ ಮಾಜಿ ಮುಖ್ಯಸ್ಥ ಅಶ್ವಿನಿ ಲೊಹಾನಿ ಕಳೆದ ವರ್ಷ ಇಂಥದ್ದೊಂದು ಪ್ರಸ್ತಾಪವನ್ನು ರೈಲ್ವೆ ಇಲಾಖೆಯ ಮುಂದಿಟ್ಟಿದ್ದರು.

ಆದರೆ, ರೈಲ್ವೆ ಇಲಾಖೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಲೊಹಾನಿ ಅವರು ಈಗ ರೈಲ್ವೆ ಮಂಡಳಿಯ ಮುಖ್ಯಸ್ಥರಾಗಿದ್ದು, ಒಂದು ವೇಳೆ ಏರ್ ಇಂಡಿಯಾದಿಂದ ಪ್ರಸ್ತಾವನೆ ಬಂದರೆ ಅದನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.

ಸೀಟು ಖಚಿತವಾಗದ ಪ್ರಯಾಣಿಕರ ಮಾಹಿತಿಯನ್ನು ಏರಿಂಡಿಯಾಕ್ಕೆ ನೀಡಲಾಗುವುದು. ಅವರು ಸೂಕ್ತ ದರಕ್ಕೆ ಪ್ರಯಾಣಿಕರಿಗೆ ಟಿಕೆಟ್ ಒದಗಿಸಬಹುದು. ಇದರಿಂದ ಏರ್ ಇಂಡಿಯಾಕ್ಕೂ

ಲಾಭವಾಗುತ್ತದೆ ಎಂದಿದ್ದಾರೆ.