ಎಷ್ಟೋ ವರ್ಷಗಳ ನಂತರ ತಮಿಳು ಚಿತ್ರರಂಗದ ದಿಗ್ಗಜರಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಂದೇ ವೇದಿಕೆಯಲ್ಲಿ ಒಟ್ಟಿಗೇ ಕಾಣಿಸಿಕೊಳ್ಳಲಿದ್ದಾರೆ.  ಮಲೇಶಿಯಾದಲ್ಲಿ  ನಡೆಯುವ ನಾಡಿಗರ ಸಂಗಮ ಸಮಾವೇಶದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ನವದೆಹಲಿ (ಜ.05):ಎಷ್ಟೋ ವರ್ಷಗಳ ನಂತರ ತಮಿಳು ಚಿತ್ರರಂಗದ ದಿಗ್ಗಜರಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಂದೇ ವೇದಿಕೆಯಲ್ಲಿ ಒಟ್ಟಿಗೇ ಕಾಣಿಸಿಕೊಳ್ಳಲಿದ್ದಾರೆ. ಮಲೇಶಿಯಾದಲ್ಲಿ ನಡೆಯುವ ನಾಡಿಗರ ಸಂಗಮ ಸಮಾವೇಶದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ತಮಿಳು ಚಿತ್ರರಂಗದ ಸ್ಟಾರ್ ನಟರಿಬ್ಬರು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹ. ವಿಭಿನ್ನ ರಾಜಕೀಯ ನಿಲುವು ಹೊಂದಿದವರಾದ ರಜನೀಕಾಂತ್ ಹಾಗೂ ಕಮಲ್ ಹಾಸನ್'ಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ರಾಜಕೀಯಕ್ಕೆ ಸೇರಿದ ಬಳಿಕ 'ಆಧ್ಯಾತ್ಮಿಕ ರಾಜಕೀಯಕ್ಕೆ' ನಾನು ಹೆಚ್ಚು ಒತ್ತು ನೀಡುತ್ತೇನೆ ಎಂದು ರಜನೀಕಾಂತ್ ಹೇಳಿದ್ದಾರೆ. ಆದರೆ ಆಧ್ಯಾತ್ಮಿಕ ರಾಜಕೀಯ ಎಂದರೇನು ಎಂಬುದಕ್ಕೆ ತಮ್ಮ ವ್ಯಾಖ್ಯಾನವನ್ನು ನೀಡಿಲ್ಲ.

ಕಳೆದ ಸುಮಾರು ವರ್ಷಗಳಿಂದ ಮಲೇಶಿಯಾದಲ್ಲಿ ನಾಡಿಗರ ಸಮಾವೇಶ ನಡೆಯುತ್ತಿದೆ.