28 ಗಂಟೆ ಕಳೆದರೂ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಜೀವ ಕಳೆದುಕೋಮಡ ಸಹಕಲಾವಿದರಾದ ಅನಿಲ್ ಮತ್ತು ಉದಯ್ ಮೃತದೇಹ ಸಿಕ್ಕಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಮುಳುಗು ತಜ್ಞರು ಎಷ್ಟೇ ಹುಡುಕಿದರೂ ಸುಳಿವು ಸಿಕ್ಕಿಲ್ಲ. ಹೀಗಾಗಿ, ಹೊಸ ವಿಧಾನದ ಮೂಲಕ ಶವಗಳ ಶೋಧಕ್ಕೆ ಮುಂದಾಗಿದ್ದಾರೆ.

ಬೆಂಗಳೂರು(ನ.08): ಹೊಸ ವಿಧಾನದ ಮೂಲಕ ಉದಯ್ ಮತ್ತು ಅನಿಲ್ ಶವಗಳ ಪತ್ತೆಗೆ ಕಾರ್ಯಾಚರಣೆ

28 ಗಂಟೆ ಕಳೆದರೂ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಜೀವ ಕಳೆದುಕೋಮಡ ಸಹಕಲಾವಿದರಾದ ಅನಿಲ್ ಮತ್ತು ಉದಯ್ ಮೃತದೇಹ ಸಿಕ್ಕಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಮುಳುಗು ತಜ್ಞರು ಎಷ್ಟೇ ಹುಡುಕಿದರೂ ಸುಳಿವು ಸಿಕ್ಕಿಲ್ಲ. ಹೀಗಾಗಿ, ಹೊಸ ವಿಧಾನದ ಮೂಲಕ ಶವಗಳ ಶೋಧಕ್ಕೆ ಮುಂದಾಗಿದ್ದಾರೆ.

 ಮಾಸ್ತಿಗುಡಿ ಶೂಟಿಂಗ್​ ವೇಳೆ ತಿಪ್ಪಗೊಂಡನಹಳ್ಳಿ ಕೆರೆಗೆ ಧುಮುಕಿ ಜೀವ ಬಿಟ್ಟ ಅನಿಲ್, ಉದಯ್​ ಶವಗಳಿಗಾಗಿ ಹೊಸ ವಿಧಾನದ ಕಾರ್ಯಾಚರಣೆ ನಡೆಯುತ್ತಿದೆ. ಇಬ್ಬರೂ ಮುಳುಗಿದ ಸ್ಥಳದಲ್ಲಿ ನೀರನ್ನು ಪಲ್ಲಟ ಮಾಡಿಸಲು ಸಿದ್ಧತೆ ಮಾಡಲಾಗಿದೆ. ನೀರನ್ನು ಪೈಪ್​`​​​​​​​ಗಳಿಂದ ರಭಸವಾಗಿ ಆ ಸ್ಥಳಕ್ಕೆ ಹಾಯಿಸಲಾಗುತ್ತೆ. ಹಾಯಿಸಿದ ನೀರಿನ ಒತ್ತಡಕ್ಕೆ ಒಳಗಿನ ನೀರು ಮೇಲಕ್ಕೆ ಬರುತ್ತೆ. ಈ ಪ್ರಕ್ರಿಯೆಯನ್ನು ಮತ್ತೆ ಮತ್ತೆ ಮಾಡಲಾಗುತ್ತದೆ. ಇದರಿಂದ ಒಂದೊಮ್ಮೆ ಶವಗಳು ಕೆಸರಿನಲ್ಲಿ ಸಿಲುಕಿದ್ದರೆ ಮೇಲೆ ಬರುತ್ತವೆ.