ದೆಹಲಿಯಲ್ಲಿ ಈ ಕುರಿತು ಶಶಿಕಾಂತ್ ದಾಸ್ ಹೇಳಿಕೆ ನೀಡಿದ್ದು, ಬ್ಯಾಂಕ್, ಅಂಚೆ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, 500 ರೂ ಮತ್ತು 1000 ರೂ ನೋಟುಗಳನ್ನು ಬದಲಾವಣೆ ಮಾಡಿಕೊಂಡವರ ಕೈ ಬೆರಳಿಗೆ ಶಾಯಿ ಹಾಕಬೇಕು.
ದೆಹಲಿ(ನ.15): 500 ರೂ ಮತ್ತು 1000 ರೂ ನೋಟುಗಳ ಬದಲಾವಣೆಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯುವ ಸಲುವಾಗಿ ಒಂದು ಬೆರಳಿಗೆ ಶಾಯಿ ಹಚ್ಚಲು ಸೂಚನೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸೂಚಿಸಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಈ ಕುರಿತು ಶಶಿಕಾಂತ್ ದಾಸ್ ಹೇಳಿಕೆ ನೀಡಿದ್ದು, ಬ್ಯಾಂಕ್, ಅಂಚೆ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, 500 ರೂ ಮತ್ತು 1000 ರೂ ನೋಟುಗಳನ್ನು ಬದಲಾವಣೆ ಮಾಡಿಕೊಂಡವರ ಕೈ ಬೆರಳಿಗೆ ಶಾಯಿ ಹಾಕಬೇಕು.
ಈ ಮೂಲಕ ಒಬ್ಬರೇ ಹಲವು ಬಾರಿ ನೋಟು ಬದಲಾವಣೆ ಮಾಡುವುದನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎನ್ನಲಾಗಿದೆ.
ಒಂದು ಕಡೆ ಬ್ಯಾಂಕ್ ಮತ್ತು ಎಟಿಎಂ ಮುಂದೆ ಜನ ಸೇರಿದ್ದು, ಇಂತಹ ಸಂದರ್ಭದಲ್ಲಿ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಬಿಸಿ ತುಪ್ಪದ ಹಾಗೇ ಆಗಿದೆ.