Asianet Suvarna News Asianet Suvarna News

ಮಕ್ಕಳ ಶಿಕ್ಷಣಕ್ಕಾಗಿ ಬೆಟ್ಟವನ್ನೇ ಕೊರೆದ : ಒಡಿಶಾದಲ್ಲೊಬ್ಬ ಮಾಂಝಿ

ಇದೀಗ ಒಡಿಶಾದಲ್ಲಿ ಬಡ ಕಾರ್ಮಿಕನೊಬ್ಬ, ತನ್ನ ಮೂವರು ಮಕ್ಕಳು ಸುಲಭವಾಗಿ ಶಾಲೆಗೆ ಹೋಗಿ ಬರಲು ಅನುಕೂಲವಾಗಲಿ ಎಂಬುದಕ್ಕಾಗಿ ಗುಡ್ಡವೊಂದನ್ನು ಕಡಿದು 15 ಕಿ.ಮೀ ರಸ್ತೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

New Manji In Odisha

ಒಡಿಶಾ(ಜ.11): ದಶರಥ ಮಾಂಝೀ ಎಂಬ ಬಿಹಾರದ ಸಾಹಸಿಯೊಬ್ಬರು ತನ್ನ ಹೆಂಡತಿಗೆ ಬಂದ ಸಾವು ಇನ್ಯಾರಿಗೂ ಬರದೇ ಇರಲಿ ಎನ್ನುವ ಕಾರಣಕ್ಕೆ ಸತತ 22 ವರ್ಷಗಳ ಕಾಲ ಬೆಟ್ಟವೊಂದು ಕಡಿದು ಗ್ರಾಮಕ್ಕೆ ರಸ್ತೆ ಮಾಡಿ ದೇಶಾದ್ಯಂತ ಸುದ್ದಿಯಾಗಿದ್ದರು.

ಇದೀಗ ಒಡಿಶಾದಲ್ಲಿ ಬಡ ಕಾರ್ಮಿಕನೊಬ್ಬ, ತನ್ನ ಮೂವರು ಮಕ್ಕಳು ಸುಲಭವಾಗಿ ಶಾಲೆಗೆ ಹೋಗಿ ಬರಲು ಅನುಕೂಲವಾಗಲಿ ಎಂಬುದಕ್ಕಾಗಿ ಗುಡ್ಡವೊಂದನ್ನು ಕಡಿದು 15 ಕಿ.ಮೀ ರಸ್ತೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಹೌದು, ಒಡಿಶಾದ ಗುಮ್ಸಾಹಿ ಗ್ರಾಮದಲ್ಲಿ ವಾಸವಾಗಿ ರುವ ಜಲಂದರ್ ನಾಯಕ್(45)ರ ಊರಲ್ಲಿ ಯಾವುದೇ ಶಾಲೆಗಳಿಲ್ಲ. ಕಂದಮಹಲ್ ಜಿಲ್ಲೆಯ ಫೂಲ್‌ಬನಿ ಪಟ್ಟಣದಲ್ಲಿ ಶಾಲೆಯಿದ್ದು, ಅಲ್ಲಿಗೆ ಹೋಗಲು 15ಕೀ.ಮೀ ಗುಡ್ಡಗಾಡು ಪ್ರದೇಶ ದಾಟಿ ಹೋಗಬೇಕು. ಆದರೆ ಅಲ್ಲಿಗೆ ತೆರಳಲು ಸೂಕ್ತ ರಸ್ತೆ ಅಥವಾ ಸಾರಿಗೆ ಸೌಲಭ್ಯಗಳಿಲ್ಲ. ಹೀಗಾಗಿ ತಮ್ಮ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ನೆರವಾಗುವಂತೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಅದಕ್ಕಾಗಿ ಕಳೆದ ಎರಡು ವರ್ಷಗಳಿಂದ ಸುತ್ತಿಗೆ ಮತ್ತು ಉಳಿ ಹಿಡಿದು ದಿನದ 8 ಗಂಟೆ ದುಡಿದು, ಬೆಟ್ಟದಲ್ಲಿ 8 ಕಿ.ಮೀ ರಸ್ತೆ ನಿರ್ಮಾಣ ಮಾಡಿದ್ದಾರೆ. ಜಲಂದರ್ ನಾಯಕ್ ಅವರ ನಿಸ್ವಾರ್ಥ ಕಾರ್ಯವೈಖರಿಗೆ ಇಲ್ಲಿನ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೆ, ಕಳೆದ ಎರಡು ವರ್ಷಗಳ ಕಾಲ ರಸ್ತೆ ನಿರ್ಮಾಣಕ್ಕಾಗಿ ದುಡಿದ ನಾಯಕ್‌ಗೆ ಎಂಜಿಎನ್‌ಆರ್‌ಇಜಿಎಸ್ ಯೋಜನೆಯಡಿ ಹಣ ಪಾವತಿಸಲಾಗುತ್ತದೆ ಎಂದು ಹೇಳಿದೆ.

Follow Us:
Download App:
  • android
  • ios