ಬೆಂಗಳೂರು [ಜು.24]: ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ ನೂತನವಾಗಿ ಜು.26ರಿಂದ ಬೆಂಗಳೂರು ಮತ್ತು ಹೈದರಾಬಾದ್‌ ನಗರಗಳ ನಡುವೆ ‘ಅಂಬಾರಿ ಡ್ರೀಮ್‌ ಕ್ಲಾಸ್‌’ ಬಸ್‌ (ಮಲ್ಟಿ ಆಕ್ಸಲ್‌ ಎ.ಸಿ ಸ್ಲೀಪರ್‌) ಕಾರ್ಯಾಚರಣೆ ಪ್ರಾರಂಭಿಸಲಿದೆ. 

ಅನಂತಪುರ, ಗುತ್ತಿ, ಕರ್ನೂಲ್‌ ಮಾರ್ಗದಲ್ಲಿ ಬಸ್‌ ಸಂಚಾರ ನಡೆಸಲಿದೆ. ಪ್ರತಿದಿನ ಬೆಂಗಳೂರಿನಿಂದ ರಾತ್ರಿ 8.50ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 7.15ಕ್ಕೆ ತಲುಪಲಿದೆ. 

ತದನಂತರ ಅದೇ ದಿನ ರಾತ್ರಿ 8.15ಕ್ಕೆ ಹೈದರಾಬಾದ್‌ನಿಂದ ಹೊರಟು ಮರುದಿನ ಬೆಳಗ್ಗೆ 7.30ಕ್ಕೆ ತಲುಪಲಿದೆ. ವಯಸ್ಕರಿಗೆ 1,350 ರು. ಪ್ರಯಾಣ ದರ ನಿಗದಿ ಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.