ಕಪ್ಪೆಗಳ ಎರಡು ಹೊಸ ಪ್ರಬೇಧಗಳ ಪತ್ತೆ: ಪರಿಸರ ಅಧ್ಯಯನಕ್ಕೆ ಸಹಕಾರಿ..!

First Published 6, Jun 2018, 2:33 PM IST
New frog species discovered in Peninsular India
Highlights

ಭೂಮಿಯಲ್ಲಿರುವ ವೈವಿದ್ಯಮಯ ಜೀವಸಂಕುಲ ಅನೇಕ ರಹಸ್ಯಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆ. ಹುಡಕಿದಷ್ಟೂ ಹೊಸ ಹೊಸ ಜೀವ ಪ್ರಬೇಧಗಳು ಪತ್ತೆಯಾಗುತ್ತಿವೆ. ಈ ಪ್ರಬೇಧಗಳು ಪರಿಸರ ಸಮತೊಲನಕ್ಕೆ ನೀಡುವ ಕೊಡುಗೆ ಕೂಡ ಅನನ್ನಯ ಎಂಬುದು ವಿಶೇಷ.

ಭುವನೇಶ್ವರ್(ಜೂ.6): ಶರೀರಶಾಸ್ತ್ರಜ್ಞರ ತಂಡವೊಂದು ಕಪ್ಪೆಯ ಎರಡು ಹೊಸ ಪ್ರಬೇಧಗಳನ್ನು ಕಂಡುಹಿಡಿದಿದ್ದು, ಅವುಗಳಲ್ಲಿ ಒಂದು ಪೂರ್ವ ಘಟ್ಟ ಪ್ರದೇಶಗಳಿಗೆ ಮತ್ತೊಂದು ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸೇರಿದ್ದಾಗಿದೆ. ಫೆಜರ್ವರ್ರಿಯಾ ಜಾತಿಗೆ ಸೇರಿದ ಕಪ್ಪೆಗಳು ಡಿಕ್ರೊಗ್ಲೋಸಿಡೆ ಕುಟುಂಬದ ಏಷ್ಯಾ ಪ್ರಾಂತ್ಯಕ್ಕೆ ಸೇರಿವೆ.

ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಫೆಜರ್ವಾರಾ ಕಳಿಂಗ ಮತ್ತು ಫೆಜರ್ವಾರಾ ಕೃಷ್ಣನ್ ಪ್ರಬೇಧದ ಕಪ್ಪೆಗಳು ಜಗತ್ತಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಸೂಚಿಸುತ್ತವೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳ ಅಧ್ಯಯನಕ್ಕೆ ಸಹಕಾರಿಯಾಗುವ ಮಾದರಿಯಲ್ಲಿದೆ.

ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ವಿಐಐ), ಝೂಲಾಜಿಕಲ್ ಸರ್ವೇ ಆಫ್ ಇಂಡಿಯಾ (ಝಡ್ಯುಎಸ್) ಮತ್ತು ನಾರ್ತ್ ಒರಿಸ್ಸಾ ವಿಶ್ವವಿದ್ಯಾಲಯಗಳು ಕಪ್ಪೆಯನ್ನು ಕಂಡುಹಿಡಿದು, ಕಳಿಂಗ ಪ್ರಬೇಧದ ಕಪ್ಪೆಗಳು ಚಳಿಗಾಲದಲ್ಲಿ ಮಾತ್ರ ಇರುತ್ತವೆ ಮತ್ತು ಮಳೆಗಾಲದಲ್ಲಿ ಇರುವುದಿಲ್ಲ ಎಂದು ಪತ್ತೆ ಹಚ್ಚಿದ್ದಾರೆ. ಕಳಿಂಗ ಕಪ್ಪೆಗಳು ಮೊದಲು ಪೂರ್ವ ಘಟ್ಟಗಳ ಅನೇಕ ಸ್ಥಳಗಳಲ್ಲಿ ಪತ್ತೆಯಾಗಿವೆ ಮತ್ತು ಕೃಷ್ಣನ್ ಮಿಡತೆ ಕಪ್ಪೆಗಳು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಜೋಗ್ ಜಲಪಾತದ ಹತ್ತಿರ ಸಿಕ್ಕಿವೆ.

loader