ಎಬೊಲ ಪೀಡಿತರ ಮೇಲೆ ನಡೆಸಲಾದ ಪ್ರಯೋಗದಲ್ಲಿ ಇದು ಅತ್ಯುತ್ತಮ ಲಿತಾಂಶ ನೀಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.
ಮಾರಣಾಂತಿಕ ಎಬೊಲಗೆ ಶೇ.100ರಷ್ಟು ಪರಿಣಾಮ ಬೀರುವ ಪ್ರಯೋಗಾತ್ಮಕ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಗಿನಿಯಲ್ಲಿ ಎಬೊಲ ಪೀಡಿತರ ಮೇಲೆ ನಡೆಸಲಾದ ಪ್ರಯೋಗದಲ್ಲಿ ಇದು ಅತ್ಯುತ್ತಮ ಲಿತಾಂಶ ನೀಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಆರ್‌ವಿಎಸ್‌ವಿ-ಜಡ್‌ಇಬಿಒವಿ ಲಸಿಕೆಯನ್ನು ಗಿನಿಯ 11,841 ಮಂದಿ ಮೇಲೆ ಪ್ರಯೋಗಿಸಲಾಗಿತ್ತು. ಅವರಲ್ಲಿ 5,837 ಜನ, ಲಸಿಕೆ ಬಳಸಿದ 10 ದಿನ ಅಥವಾ ಆನಂತರ ಎಬೊಲ ಮುಕ್ತರಾಗಿದ್ದರು ಎಂದು ದ ಲ್ಯಾನ್ಸೆಟ್ ಜರ್ನಲ್ ವರದಿ ತಿಳಿಸಿದೆ. ಡಬ್ಲ್ಯುಎಚ್‌ಒ ಗಿನಿ ಆರೋಗ್ಯ ಸಚಿವಾಲಯದ ಸಹಭಾಗಿತ್ವದಲ್ಲಿ ಪ್ರಯೋಗ ನಡೆಸಿತ್ತು.
