೬೮ನೇ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಗಣರಾಜ್ಯೋತ್ಸವಕ್ಕೆ ನವದೆಹಲಿ  ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ಬಾರಿ ಅರಬ್​'ನ ಯುವರಾಜ ಮುಖ್ಯ ಅತಿಥಿಯಾಗಲಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು, ಸ್ತಬ್ಧ ಚಿತ್ರಗಳ ಪ್ರದರ್ಶನ , ಯುದ್ಧ ವಿಮಾನಗಳ ಹಾರಾಟ ಪ್ರದರ್ಶನ ಜರುಗಲಿದೆ.

ನವದೆಹಲಿ(ಜ.26): ೬೮ನೇ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಗಣರಾಜ್ಯೋತ್ಸವಕ್ಕೆ ನವದೆಹಲಿ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈ ಬಾರಿ ಅರಬ್​'ನ ಯುವರಾಜ ಮುಖ್ಯ ಅತಿಥಿಯಾಗಲಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು, ಸ್ತಬ್ಧ ಚಿತ್ರಗಳ ಪ್ರದರ್ಶನ , ಯುದ್ಧ ವಿಮಾನಗಳ ಹಾರಾಟ ಪ್ರದರ್ಶನ ಜರುಗಲಿದೆ.

ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವಕ್ಕೆ ಭರ್ಜರಿ ಸಿದ್ದತೆ ನಡೆದಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನಡೆಸಿ ಭಾಷಣ ಮಾಡಲಿದ್ದಾರೆ. ಇನ್ನೂ ಈ ಬಾರಿ ಗಣರಾಜ್ಯೋತ್ಸವ ಪರೇಡ್'ನಲ್ಲಿ ಯುಎಇ ನ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಜಯೀದ್ ಅಲ್ ನಹ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇನ್ನೂ ಧ್ವಜಾರೋಹಣದ ಬಳಿಕ ವಿವಿಧ ಪರೇಡ್, ಸಾಹಸ ಪ್ರದರ್ಶನ ನಡೆಯಲಿವೆ. ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಸುಮಾರು ಒಂದೂವರೆ ಗಂಟೆಗಳ ಕಾರ್ಯಕ್ರಮ ಆಕರ್ಷಕ ಏರೋ ಶೋ ದೊಂದಿಗೆ ಬೆಳಗ್ಗೆ ೧೧ ೩೦ ಕ್ಕೆ ಮುಕ್ತಾಯವಾಗಲಿದೆ .

ಗಣರಾಜ್ಯೋತ್ಸವದ ವಿಶೇಷತೆಗಳು

-ರುದ್ರ ಹೆಲಿಕ್ಯಾಪ್ಟರ್ ನಿಂದ ಫ್ಲೈ ಪಾಸ್ಟ್

-ಮಿಲಿಟರಿ ಪೊಲೀಸ್'​ನ ಶ್ವೇತಾ ಅಶ್ವ ತಂಡದಿಂದ ಮೋಟಾರ್ ಸೈಕಲ್ ಸಾಹಸ ಪ್ರದರ್ಶನ

-ಯುಎಇ ಮಾರ್ಚಿಂಗ್ ತಂಡದಿಂದ ಬ್ಯಾಂಡ್ ಪರೇಡ್

-ಭೂ ಸೇನೆ, ವಾಯು ಸೇನೆ , ನೌಕಾ ಸೇನೆ ಪ್ಯಾರಾ ಮಿಲಿಟರಿಯಿಂದ ಆಕರ್ಷಕ ಪರೇಡ್

-ಒಟ್ಟು ೨೩ ಸ್ತಬ್ಧ ಚಿತ್ರಗಳು ಪರೇಡ್ ನಲ್ಲಿ ಭಾಗಿ

-ಆರು ಆರ್ಮಿ ಬ್ಯಾಂಡ್ ಗಳಿಂದ ಸಂಗೀತ ಪ್ರದರ್ಶನ

-ಶಾಲಾ ಮಕ್ಕಳಿಂದ ನಾಲ್ಕು ನೃತ್ಯ ಪ್ರದರ್ಶನಗಳು ನಡೆಯಲಿವೆ.

ಈ ಬಾರಿಯ ಕಮಾಂಡರ್ ಆಗಿ ಡೆಲ್ಲಿ ಯ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಎಂ ಎಂ ನರವಾಣೆ SM VSM ನೇತೃತ್ವ ವಹಿಸಲಿದ್ದಾರೆ. ಕರ್ನಾಟಕದ ಜಾನಪದ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸುವ ನೃತ್ಯ ರೂಪಕ ಗಳ ಸ್ತಬ್ದ ಚಿತ್ರ ಕೂಡ ಪರೇಡ್ ನಲ್ಲಿ ಪ್ರದರ್ಶಿತಗೊಳ್ಳಲಿದ್ದು ಪೂಜಾ ಕುಣಿತ ನಂದಿ ಧ್ವಜ ಕುಣಿತ ನಂದಿ ಕೋಲು ಕುಣಿತ ಕಿನ್ನರಿ ಕುಣಿತಗಳು ಪ್ರದರ್ಶನಗೊಳ್ಳಲಿವೆ .