ಮಹಾರಾಷ್ಟ್ರದಲ್ಲಿ  ನಡೆದ ಮದುವೆ ಸಮಾರಂಭದಲ್ಲಿ ನವದಂಪತಿಗಳಿಬ್ಬರು ಹೂವಿನ ಹಾರದ ಬದಲು ಹಾವಿನ ಹಾರ ಹಾಕಿ ಮದುವೆಯಾಗಿದ್ದಾರೆ.

ಹೂವಿನ ಹಾರ, ಚಿನ್ನದ ಸರ ಹಾಕಿ ಮದುವೆಯಾಗೋದನ್ನ ನೋಡಿರ್ತೀರ. ಆದರೆ ಯಾವತ್ತಾದರೂ ಹಾವಿನ ಹಾರ ಹಾಕಿಕೊಂಡು ಮದುವೆಯಾಗಿರೋದನ್ನು ಎಲ್ಲಾದರೂ ನೋಡಿದ್ದೀರಾ..?

ಅರೇ ಇದೇನಪ್ಪಾ ವಿಚಿತ್ರ ಅಂತಿರಾ, ಹೌದು ಇಲ್ಲೊಂದು ಅಪರೂಪದ ಮದುವೆ ಇಡೀ ಮಾನವ ಕುಲವನ್ನೇ ಬೆಚ್ಚಿಬೀಳಿಸುವಂತೆ ಮದುವೆ ಮಾಡಿಕೊಂಡಿದೆ.

ಮಹಾರಾಷ್ಟ್ರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನವದಂಪತಿಗಳಿಬ್ಬರು ಹೂವಿನ ಹಾರದ ಬದಲು ಹಾವಿನ ಹಾರ ಹಾಕಿ ಮದುವೆಯಾಗಿದ್ದಾರೆ. ಮಹಾರಾಷ್ಟ್ರದ ಆ ಗ್ರಾಮದಲ್ಲಿ ಈ ಸಂಪ್ರದಾಯ ಕಡ್ಡಾಯವಂತೆ. ಮದುವೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೋಡಿದವರ ಹುಬ್ಬೇರಿಸುವಂತೆ ಮಾಡಿದೆ.