ಕಟ್ಮಂಡು(ಜೂ. 06) ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಕಡ್ಮಂಡು ಪಶುಪತಿನಾಥ ದೇವಾಲಯ ಸೇರಿಕೊಂಡಿದೆ. 9.276 ಕೆಜಿ ಚಿನ್ನ ಜತೆಗೆ 1.3 ಬಿಲಿಯನ್ ರೂ. ಹಣ  ಹೊಂದಿದೆ.

ನೇಪಾಳದ ಸರಕಾರ ನೇಮಕ ಮಾಡಿದ್ದ ಸಮಿತಿ ಮೊದಲ ಸಾರಿ ದೇವಾಲಯದ ಆಸ್ತಿ ಮೊತ್ತ ಬಹಿರಂಗ ಮಾಡಿದೆ. ಕಳೆದ ಹತ್ತು ತಿಂಗಳಿನಿಂದ ಸಮಿತಿ ಅಧ್ಯಯನ ನಡೆಸಿತ್ತು. 

ಪಶುಪತಿ ಏರಿಯಾ ಡೆವಲಪ್ ಮೆಂಟ್ ಟ್ರಸ್ಟ್ ಮೂಲಕ ದೇವಾಲಯದ ಆಸ್ತಿ ವಿವರ ಲೆಕ್ಕ ಹಾಕಲಾಗಿದ್ದು 1.3 ಬಿಲಿಯನ್ ರೂಪಾಯಿ ದೇವಾಲಯದ ಹೆಸರಿನಲ್ಲಿ ಡಿಪಾಸಿಟ್ ಆಗಿದೆ ಎಂಬ ಅಂಶ  ಬಹಿರಂಗ ಮಾಡಲಾಗಿದೆ.

ಚಿನ್ನಾಭರಣ ಕೊಳ್ಳುವ ಮುನ್ನ ಇದನ್ನೆಲ್ಲ ಓದಿ

5ನೇ ಶತಮಾನದ ಕಾಲದಲ್ಲಿ ನಿರ್ಮಾಣವಾದ ದೇವಾಲಯ ಏ‍ಷ್ಯಾ ಖಂಡದಲ್ಲಿಯೇ ಶಿವ ಭಕ್ತರ ಪುಣ್ಯ ಕ್ಷೇತ್ರವಾಗಿದೆ. 994.14 ಹೆಕ್ಟೇರ್ ಪ್ರದೇಶ ಸಹ ದೇವಾಲಯದ ಒಡೆತನದಲ್ಲಿದೆ. 

ಇದಲ್ಲದೇ ದೇವಾಲಯುದ ಮುಖ್ಯ ಖಜಾನೆಯಲ್ಲಿರುವ ಚಿನ್ನಾಭರಣ, ಬೆಳ್ಳಿ ಆಭರಣ ಮತ್ತು ಹಣವನ್ನು ಸಮಿತಿ ಇನ್ನು ಲೆಕ್ಕ ಮಾಡಿಲ್ಲ.  ನೇಪಾಳದ ಸುಪ್ರೀಂ ಕೋರ್ಟ್ ಖಜಾನೆಯನ್ನು ಸದಾ ಬಂದ್ ಮಾಡಿರುವಂತೆ ಹೇಳಿದೆ.

ಏನೇ ಆದರೂ ನಮ್ಮ ತಿರುಪತಿ ತಿರುಮಲನ ಆಸ್ತಿ ಮೀರಿಸಲು ಸಾಧ್ಯವೇ ಇಲ್ಲ ಬಿಡಿ. ಏಪ್ರಿಲ್ ತಿಂಗಳ ವರದಿಯಂತೆ 12 ಸಾವಿರ ಕೋಟಿ ರೂ. ಗಳನ್ನು ತಿಮ್ಮಪ್ಪ ವಿವಿಧ ಬ್ಯಾಂಕ್ ನಲ್ಲಿ ಇಟ್ಟಿದ್ದರೆ 8.7 ಟನ್ ಶುದ್ಧ ಬಂಗಾರವೇ ತಿಮ್ಮಪ್ಪನ ಬಳಿ ಇದೆ.