ಮಾಜಿ ರಾಜ್ಯ ಮಾಹಿತಿ ಆಯುಕ್ತ ಶಂಕರ ಆರ್. ಪಾಟೀಲ್​, ನಿವೃತ್ತ ಡಿವೈಎಸ್​ಪಿ ಸೋಮಶೇಖರ ಛಬ್ಬಿ, ಸಾಮಾಜಿಕ ಕಾರ್ಯಕರ್ತ ಎಂ.ಜಿ. ರಂಗಧಾಮಯ್ಯ ಮತ್ತು ಕೆಲವು ಕಿರುತೆರೆ ನಟಿಯರು ಮತ್ತು ವಕೀಲರು ಕೂಡಾ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬೆಂಗಳೂರು(ಅ. 01): ಮಹಾಲಕ್ಷ್ಮೀ ಲೇಔಟ್​'ನ ಮಾಜಿ ಶಾಸಕ ಹಾಗೂ ಮಾಜಿ ಕಾಂಗ್ರೆಸ್ ಮುಖಂಡ ನೆ.ಲ. ನರೇಂದ್ರಬಾಬು ಇಂದು ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನರೇಂದ್ರಬಾಬು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರ ರಾವ್​, ವಿಧಾನಸಭೆ ವಿಪಕ್ಷ ಉಪನಾಯಕ ಆರ್. ಅಶೋಕ್​ ಸೇರಿದಂತೆ ಹಲವು ಬಿಜೆಪಿ ಮುಖಂಡರು ಈ ವೇಳೆ ಉಪಸ್ಥಿತರಿದ್ದರು. ಇದೇ ವೇಳೆ, ಮಾಜಿ ರಾಜ್ಯ ಮಾಹಿತಿ ಆಯುಕ್ತ ಶಂಕರ ಆರ್. ಪಾಟೀಲ್​, ನಿವೃತ್ತ ಡಿವೈಎಸ್​ಪಿ ಸೋಮಶೇಖರ ಛಬ್ಬಿ, ಸಾಮಾಜಿಕ ಕಾರ್ಯಕರ್ತ ಎಂ.ಜಿ. ರಂಗಧಾಮಯ್ಯ ಮತ್ತು ಕೆಲವು ಕಿರುತೆರೆ ನಟಿಯರು ಮತ್ತು ವಕೀಲರು ಕೂಡಾ ಬಿಜೆಪಿ ಸೇರ್ಪಡೆಯಾಗಿದ್ದಾರೆ.