ಈ ಬಾರಿ ಎನ್'ಡಿಪಿಪಿ ಮೈತ್ರಿ ಗೆದ್ದರೆ 4ನೇ ಬಾರಿ ಮುಖ್ಯಮಂತ್ರಿಯಾಗುತ್ತಾರೆ. ನಾಗಾಲ್ಯಾಂಡಿನ ಉತ್ತರದ ಅಂಗಮಿ-2 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು

ಕೊಹಿಮಾ(ಫೆ.13): ನಾಗಲ್ಯಾಂಡ್ ಚುನಾವಣೆ ಫೆ.27ರಂದು ನಡೆಯಲಿದ್ದು, ಇಲ್ಲಿನ ಮಾಜಿ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ನೀಫಿಯು ರಿಯೊ ತಮ್ಮ ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವರು ತಮ್ಮ ಮೂಲ ಪಕ್ಷ ಎನ್'ಪಿ'ಎಫ್ ಬಿಟ್ಟು ಬಿಜೆಪಿ ಮೈತ್ರಿಯ ನೂತನ ಎನ್'ಡಿಪಿಪಿ ಪಕ್ಷವನ್ನು ಸೇರಿಕೊಂಡಿದ್ದಾರೆ. ಈ ಬಾರಿ ಎನ್'ಡಿಪಿಪಿ ಮೈತ್ರಿ ಗೆದ್ದರೆ 4ನೇ ಬಾರಿ ಮುಖ್ಯಮಂತ್ರಿಯಾಗುತ್ತಾರೆ. ನಾಗಾಲ್ಯಾಂಡಿನ ಉತ್ತರದ ಅಂಗಮಿ-2 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಪ್ರತಿಸ್ಪರ್ಧಿ ಎನ್'ಪಿ'ಎಫ್'ನ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದುಕೊಂಡ ಕಾರಣ ಗೆಲುವು ಸಾಧಿಸಿದ್ದಾರೆ.

ರಿಯೋ ಅವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು 1998ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಅವಿರೋಧವಾಗಿ ಗೆಲುವು ಸಾಧಿಸಿದ್ದರು. ಪ್ರಸ್ತುತ ಸಂಸದರಾಗಿದ್ದ ಇವರು ಶಾಸಕರಾದ ಕಾರಣ ಲೋಕಸಭೆಗೆ ರಾಜೀನಾಮೆ ನೀಡಬೇಕಾಗಿದೆ.