ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ, ಸಿಬಿಐ ತನಿಖೆಗೆ ಹಾಜರಾಗಲು ನಿರಾಕರಿಸಿದ್ದಾರೆ. ತನಿಖೆಗೆ ಹಾಜರಾಗುವಂತೆ ನಿರ್ದೇಶಿಸಿ ನೀರವ್ ಮೋದಿಯ ಅಧಿಕೃತ ಇ-ಮೇಲ್ ಐಡಿಗೆ, ಸಿಬಿಐ ಇ-ಮೇಲ್ ರವಾನಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ತಾನು ಯಾವುದೇ  ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ನವದೆಹಲಿ (ಮಾ. 01): ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ, ಸಿಬಿಐ ತನಿಖೆಗೆ ಹಾಜರಾಗಲು ನಿರಾಕರಿಸಿದ್ದಾರೆ. ತನಿಖೆಗೆ ಹಾಜರಾಗುವಂತೆ ನಿರ್ದೇಶಿಸಿ ನೀರವ್ ಮೋದಿಯ ಅಧಿಕೃತ ಇ-ಮೇಲ್ ಐಡಿಗೆ, ಸಿಬಿಐ ಇ-ಮೇಲ್ ರವಾನಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೆ, ಉದ್ಯಮ ಪ್ರವಾಸಕ್ಕಾಗಿ ವಿದೇಶದಲ್ಲಿರುವುದರಿಂದ, ತನಿಖೆಗೆ ಹಾಜರಾಗಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದಾರೆ. ಅದಕ್ಕೆ ಸಿಬಿಐ ಮತ್ತೊಂದು ಇ-ಮೇಲ್ ರವಾನಿಸಿದ್ದು, ತಕ್ಷಣವೇ ಭಾರತದ ರಾಯಭಾರಿ ಕಚೇರಿ
ಯನ್ನು ಭೇಟಿಯಾಗುವಂತೆ ಸೂಚಿಸಿದೆ. ಮುಂದಿನ ವಾರ ಕಡ್ಡಾಯವಾಗಿ ತನಿಖೆಗೆ ಹಾಜರಾಗಬೇಕು. ಇದು ಅನಿವಾರ್ಯ ಎಂದೂ ಅವರಿಗೆ ಸಿಬಿಐ ತಿಳಿಸಿದೆ.