Asianet Suvarna News Asianet Suvarna News

3 ವರ್ಷದಲ್ಲಿ ರೈಲಿಗೆ ಬಲಿಯಾದವರೆಷ್ಟು? ಅಂಕಿ ಅಂಶಗಳು ಬಹಿರಂಗ

 3 ವರ್ಷದಲ್ಲಿ ರೈಲಿಗೆ ಬಲಿಯಾದವರೆಷ್ಟು? ಭಾರತೀಯ ರೈಲ್ವೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಹಾಗಾದ್ರೆ ರೈಲಿಗೆ ಬಲಿಯಾದವರ ಸಂಖ್ಯೆ ಎಷ್ಟು ಗೊತ್ತಾ? ಇಲ್ಲಿದೆ ವಿವರ.

Nearly 50,000 deaths in 3 years after being hit by trains according to Indian Railways
Author
Bengaluru, First Published Oct 23, 2018, 9:20 AM IST

ನವದೆಹಲಿ, (ಅ.23): ಪಂಜಾಬಿನ ಅಮೃತಸರದಲ್ಲಿ ದಸರಾ ಆಚರಣೆಯ ವೇಳೆ ರೈಲು ಹರಿದು 61 ಮಂದಿ ಸಾವನ್ನಪ್ಪಿದ ಘಟನೆ ಜನರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ, 2015ರಿಂದ 2017ರ ಅವಧಿಯಲ್ಲಿ ರೈಲು ಡಿಕ್ಕಿಯಾಗಿ ಸುಮಾರು 50,000 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಸಂಗತಿ ಭಾರತೀಯ ರೈಲ್ವೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಈ ಪ್ರಕಾರ ಹೆಚ್ಚಿನ ರೈಲು ಅಪಘಾತಗಳು ಉತ್ತರ ರೈಲ್ವೆ ವಲಯದಲ್ಲಿ ಸಂಭವಿಸಿದ್ದು, 7,908 ಮಂದಿ ರೈಲು ಹರಿದು ಸಾವನ್ನಪ್ಪಿದ್ದಾರೆ. ದಕ್ಷಿಣ ವಲಯದಲ್ಲಿ 6,149 ಮಂದಿ ಹಾಗೂ ಪೂರ್ವ ರೈಲ್ವೆ ವಲಯದಲ್ಲಿ 5,670 ಮಂದಿ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದಾರೆ.

ರೈಲ್ವೆ ಕಾಯ್ದೆ 1989ರ 147ನೇ ಸೆಕ್ಷನ್‌ ಪ್ರಕಾರ ರೈಲ್ವೆ ಆವರಣವನ್ನು ರೈಲ್ವೆ ಹಳಿಗಳು ಮತ್ತು ರೈಲ್ವೆ ಆವರಣವನ್ನು ಅನುಮತಿ ಇಲ್ಲದೇ ಪ್ರವೇಶಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಸಂಬಂಧ ರೈಲ್ವೆ ಪೊಲೀಸರು 1,20,923 ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Follow Us:
Download App:
  • android
  • ios