ಮನಿಲಾ[ಸೆ.10]: ಫಿಲಿಪ್ಪೀನ್ಸ್‌ ರಾಜಧಾನಿ ಮನಿಲಾದಲ್ಲಿ ಸೋಮವಾರ ಆಯೋಜಿಸಿದ್ದ 2019ನೇ ಸಾಲಿನ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಸಮಾರಂಭದಲ್ಲಿ ಎನ್‌ಡಿಟಿವಿಯ ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ಅವರಿಗೆ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರವೀಶ್‌ ಕುಮಾರ್‌ ಪತ್ರಕರ್ತರಾಗಿ ಸಾಮಾನ್ಯ ಜನರ ಸಮಸ್ಯೆಗಳು ಮತ್ತು ವಾಸ್ತವ ಬದುಕಿನ ಕುರಿತು ವರದಿ ಮಾಡಿದ್ದಾರೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಫೌಂಡೇಶನ್‌ ಪ್ರಶಸ್ತಿಯಲ್ಲಿ ಉಲ್ಲೇಖಿಸಿದೆ.

ಬಿಹಾರದ ಜಿತ್ವಾರ್‌ಪುರ ಗ್ರಾಮದಲ್ಲಿ ಜನಿಸಿದ ರವೀಶ್‌ ಕುಮಾರ್‌ 1996ರಲ್ಲಿ ಎನ್‌ಡಿ ಟೀವಿಗೆ ಸೇರ್ಪಡೆಯಾಗಿದ್ದರು.