Asianet Suvarna News Asianet Suvarna News

ರಾಷ್ಟ್ರಪತಿ ಚುನಾವಣೆ: ಎನ್'ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ ಮುನ್ನಡೆ

15 ನೇ ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು  ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ.  ಎನ್​ಡಿಎ ಅಭ್ಯರ್ಥಿ ರಾಮನಾಥ್​ ಕೋವಿಂದ್ ಮೀರಾ ಕುಮಾರ್''ರನ್ನು ಹಿಂದಿಕ್ಕಿ  2 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ದೆಹಲಿಯ ಸಂಸತ್​ ಭವನದಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಸಂಜೆ 5 ಗಂಟೆ ಸುಮಾರಿಗೆ ಫಲಿತಾಂಶ ಪ್ರಕಟಗೊಳ್ಳಲಿದೆ.

NDA nominee Ram Nath Kovind leading as counting of votes continues
  • Facebook
  • Twitter
  • Whatsapp

ನವದೆಹಲಿ (ಜು.20): 15 ನೇ ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು  ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ.  ಎನ್​ಡಿಎ ಅಭ್ಯರ್ಥಿ ರಾಮನಾಥ್​ ಕೋವಿಂದ್ ಮೀರಾ ಕುಮಾರ್''ರನ್ನು ಹಿಂದಿಕ್ಕಿ  2 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ದೆಹಲಿಯ ಸಂಸತ್​ ಭವನದಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಸಂಜೆ 5 ಗಂಟೆ ಸುಮಾರಿಗೆ ಫಲಿತಾಂಶ ಪ್ರಕಟಗೊಳ್ಳಲಿದೆ.

ಬಿಹಾರದಲ್ಲಿ ಕೋವಿಂದ್​ ಪರ ನಿತೀಶ್​  ಬಣ ಮತ ಹಾಕಿದೆ. ಬಿಹಾರ ಹಾಗೂ ಅಸ್ಸಾಂ ರಾಜ್ಯದಲ್ಲಿ ಕೋವಿಂದ್​ಗೆ ಮುನ್ನಡೆ ಸಾಧಿಸಿದ್ದಾರೆ.  ಅಸ್ಸಾಂನಲ್ಲಿ ಕೋವಿಂದ್​ ಪರ 91, ಮೀರಾ ಪರ 25 ಮತ ಬಿದ್ದಿದ್ದರೆ , ಬಿಹಾರದಲ್ಲಿ ಕೋವಿಂದ್​ ಪರ 130, ಮೀರಾ ಪರ 109 ಮತ ಬಿದ್ದಿದೆ. ಎನ್'ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದಾ ಗೆಲ್ಲುವುದು ಬಹುತೇಕ ಖಚಿತವಾಗಿದ್ದರೂ ಫಲಿತಾಂಶಕ್ಕಾಗಿ ಸಂಜೆ 5 ಗಂಟೆವರೆಗೆ ಕಾಯಲೇಬೇಕಾಗಿದೆ.

ಜು. 25 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರಾವಧಿ ಮುಕ್ತಾಯಗೊಳ್ಳಲಿದ್ದು ರಾಮನಾಥ್ ಕೋವಿಂದ/ಮೀರಾ ಕುಮಾರ್ ಮುಂದಿನ ರಾಷ್ಟ್ರಪತಿಯಾಗಲಿದ್ದಾರೆ.

 

Follow Us:
Download App:
  • android
  • ios