ನಮ್ಮ ಬೆಂಗಳೂರು ಫೌಂಡೇಷನ್'ನಿಂದ ಕೋಳಿವಾಡ ವರದಿ ಪ್ರಸ್ತುತತೆಯ ಬಗ್ಗೆ ಸಂವಾದ
ಬೆಂಗಳೂರು(ಡಿ.09): ನೀರಿಲ್ಲದ ಕೆರೆಗಳನ್ನು ಮೃತ ಕೆರೆಗಳೆಂದು ಘೋಷಿಸಿ ಲೇಔಟ್ ನಿರ್ಮಿಸಲು ಅವಕಾಶ ಕೊಟ್ಟಿರುವ ಕೋಳಿವಾಡ ಸಮಿತಿಯ ವರದಿಯ ಪ್ರಸ್ತುತೆಯ ಬಗ್ಗೆ ಇಂದು ಕಬ್ಬನ್ ಪಾರ್ಕ್ನಲ್ಲಿ ನಾಗರೀಕ ಸಂವಾದ ನಡೆಯಿತು. ಸರ್ಕಾರದ ಉದ್ದೇಶಗಳನ್ನು ಪ್ರಶ್ನಿಸಿ ಬೆಂಗಳೂರನ್ನು ಉಳಿಸಿಕೊಳ್ಳುವ ಮಾರ್ಗೋಪಾಯದ ಬಗ್ಗೆ ಯುನೈಟೆಡ್ ಬೆಂಗಳೂರು, ನಮ್ಮ ಬೆಂಗಳೂರು ಫೌಂಡೇಶನ್, ಸಿಟಿಝನ್ ಅ್ಯಕ್ಷನ್ ಫೋರಂ ಸೇರಿದಂತೆ ಹಲವು ನಾಗರೀಕ ಸಂಘಟನೆಗಳು ಚರ್ಚೆ ನಡೆಸಿದವು. ಸಂಸದ ರಾಜೀವ ಚಂದ್ರಶೇಖರ್, ಸುಪ್ರೀಂ ಕೋರ್ಟ್ ವಕೀಲ ಸಜ್ಜನ್ ಪೂವಯ್ಯ, ಸೇರಿದಂತೆ ಹಲವಾರು ಪರಿಸರ ಪ್ರೇಮಿಗಳು, ಸಾಮಾಜಿಕ ಹೋರಾಟಗಾರ, ತಜ್ಞರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
