ಶಿರಾಡಿ ಅರಣ್ಯದಲ್ಲಿ ನಕ್ಸಲ್ ಚಲನವಲನದ ಹಿಂದೆ ಹತ್ಯೆ ಸಂಚು

First Published 16, Jan 2018, 2:04 PM IST
Naxals In Shiradi Ghat
Highlights

ಶಿರಾಡಿ ಅರಣ್ಯದಲ್ಲಿ ನಕ್ಸಲ್ ಚಲನವಲನ ಕಂಡು ಬಂದಿರುವ ವಿಚಾರದ ಹಿಂದೆ ಹತ್ಯೆ ಸಂಚಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಮಾಹಿತಿದಾರ ರಿಜುವನ್ನು ಹತ್ಯೆ ಮಾಡುವ ಸಲುವಾಗಿ ಹುಡುಕಿಕೊಂಡು ಬಂದಿದ್ದರು ಎನ್ನಲಾಗಿದೆ.

ಮಂಗಳೂರು (ಜ.16): ಶಿರಾಡಿ ಅರಣ್ಯದಲ್ಲಿ ನಕ್ಸಲ್ ಚಲನವಲನ ಕಂಡು ಬಂದಿರುವ ವಿಚಾರದ ಹಿಂದೆ ಹತ್ಯೆ ಸಂಚಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಮಾಹಿತಿದಾರ ರಿಜುವನ್ನು ಹತ್ಯೆ ಮಾಡುವ ಸಲುವಾಗಿ ಹುಡುಕಿಕೊಂಡು ಬಂದಿದ್ದರು ಎನ್ನಲಾಗಿದೆ.

ಮಿತ್ತಮಜಲು ನಿವಾಸಿ ಹಾಗೂ ಆಂಬುಲೆನ್ಸ್ ಚಾಲಕ, ಹೋಂಗಾರ್ಡ್ ಆಗಿರುವ ರಿಜು ಬಗ್ಗೆ ಸುರೇಶ್ ಎನ್ನುವವರ ಬಳಿ ಮಾಹಿತಿ ಕೇಳಿದ್ದರು ಎನ್ನಲಾಗಿದೆ.

2012ರಲ್ಲಿ ಒಬ್ಬ ನಕ್ಸಲ್’ನನ್ನು ಎನ್’ಕೌಂಟರ್ ಮಾಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಸುಬ್ರಮಣ್ಯದ ಅರಣ್ಯದಲ್ಲಿ ಈ ಎನ್’ಕೌಂಟರ್ ನಡೆಸಲಾಗಿತ್ತು. ಈ ವೇಳೆ ರಿಜುವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದ್ದರಿಂದ ಅವರನ್ನು ಹುಡುಕಿಕೊಂಡು ಬಂದಿದ್ದಾಗಿ  ಸುರೇಶ್ ಎನ್ನುವವರ ಬಳಿ ನಕ್ಸಲರು ಹೇಳಿದ್ದಾರೆ ಎನ್ನಲಾಗಿದೆ.

loader