ಅಮಿತ್ ಶಾ ಆಗಮನಕ್ಕೆ ನಕ್ಸ್'ಲರ ಭೀತಿ: ಮುಂಜಾಗ್ರತೆಗಾಗಿ ನಕ್ಸ'ಲ್ ಕೋಂಬಿಂಗ್

First Published 19, Feb 2018, 8:40 PM IST
Naxal tension at coastal karnataka
Highlights

ಮುಂಜಾಗ್ರತೆಗಾಗಿ ನಕ್ಸ'ಲ್ ಕೋಂಬಿಂಗ್

ಮಂಗಳೂರು(ಫೆ.19): ಅಮಿತ್ ಶಾ ಕರಾವಳಿ ಜಿಲ್ಲೆಗಳಿಗೆ ಆಗಮನಕ್ಕೆ ನಕ್ಸಲ್'ರ ಭೀತಿ ಎದುರಾಗಿದೆ. ಮುಂಜಾಗ್ರತೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕುಗಳಲ್ಲಿ  ನಕ್ಸಲ್ ಕೂಂಬಿಂಗ್ ಆರಂಭಿಸಲಾಗಿದ್ದು ಎ.ಎನ್.ಎಫ್, ಎ.ಎನ್.ಎಸ್ ಮತ್ತು ಜಿಲ್ಲಾ ಪೊಲೀಸರು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.

ಪ್ಯಾರಾ ಮಿಲಿಟರಿ ಫೋರ್ಸ್ ಮತ್ತು ಜಿಲ್ಲಾ ಪೊಲೀಸರಿಂದ ಜಿಲ್ಲೆಗಳಾದ್ಯಂತ  ಭದ್ರತೆ ಒದಗಿಸಲಾಗಿದೆ. ಇಂದು 7.30 ರ ಸುಮಾರಿಗೆ ಮಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಾಗಿದ್ದಾರೆ.

ಕೆಲ ದಿನಗಳ ಹಿಂದೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಪಶ್ಚಿಮ ಘಟ್ಟದ ಎರಡು ಕಡೆ ಶಸ್ತ್ರ ಸಜ್ಜಿತ ನಕ್ಸಲರು ಕಾಣಿಸಿಕೊಂಡಿದ್ದರು.

loader