ಶಿರಾಡಿ ಭಾಗದಲ್ಲಿ ನಕ್ಸಲ್ ಕೂಂಬಿಂಗ್

First Published 16, Jan 2018, 10:39 AM IST
Naxal Kumbing In Shiradi
Highlights

ಶಿರಾಡಿ ಗ್ರಾಮದಲ್ಲಿ ಶಂಕಿತ ಶಸ್ತ್ರಧಾರಿ ನಕ್ಸಲರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಶಿರಾಡಿ ಭಾಗದ ಕಾಡಿನಲ್ಲಿ ನಕ್ಸಲ್ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಶಿರಾಡಿ (ಜ.16): ಶಿರಾಡಿ ಗ್ರಾಮದಲ್ಲಿ ಶಂಕಿತ ಶಸ್ತ್ರಧಾರಿ ನಕ್ಸಲರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಶಿರಾಡಿ ಭಾಗದ ಕಾಡಿನಲ್ಲಿ ನಕ್ಸಲ್ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿ ಗ್ರಾಮದಲ್ಲಿ ಬಂದು ತಮ್ಮ ಹೆಸರನ್ನು ಹೇಳಿಕೊಂಡು ತಾವು ನಕ್ಸಲರು ಎಂದು ಹೇಳಿಕೊಂಡ ಹಿನ್ನೆಲೆ ಕೂಂಬಿಂಗ್ ನಡೆಸಲಾಗುತ್ತಿದೆ.

ಲತಾ, ರಾಜೇಶ್ ಮತ್ತು ಪುರುಷೋತ್ತಮ್ ಎಂದು ಹೆಸರು ಉಲ್ಲೆಖ ಮಾಡಿ  ಶಿರಾಡಿಯ ಮಿತ್ತಜಲು ಗ್ರಾಮದಲ್ಲಿ ಲೀಲಾ, ಸುರೇಶ್ ಮತ್ತು ಮೋಹನ್ ಎನ್ನುವವರ ಮನೆಗಳಿಗೆ ಭೇಟಿ ನೀಡಿದ್ದರು. ಇವರೆಲ್ಲರೂ ತಮಿಳು, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅಲ್ಲದೇ ಎಲ್ಲರ ಬಳಿಯೂ ಕೂಡ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇದ್ದವು ಎಂದು ಹೇಳಿದ್ದರು. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು.

loader