ಲಾಹೋರ್ (ಜು. 10): ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾದ ಪಾಕ್‌ನ ಉಚ್ಛಾಟಿತ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಪುತ್ರಿ ಮರ್ಯಾಮ್ ನವಾಜ್ ಪಾಕಿಸ್ತಾನಕ್ಕೆ ಆಗಮಿಸಿದ ಕೂಡಲೇ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಇದೇ ವೇಳೆ ಲಾಹೋರ್ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಸಂಜೆ 6.15 ಕ್ಕೆ ಇತ್ತೆಹಾದ್ ವಿಮಾನದ ಮೂಲಕ ಆಗಮಿಸುವುದಾಗಿ ಮರ್ಯಾಮ್ ತಿಳಿಸಿದ್ದಾರೆ. ಇಸ್ಲಾಮಾಬಾದ್‌ನ ಉತ್ತರದಾಯಿತ್ವ ಕೋರ್ಟ್ ಪನಾಮಾ ಹಗರಣ ಸಂಬಂಧ ನವಾಜ್ ಷರೀಫ್‌ಗೆ 10 ವರ್ಷ ಹಾಗೂ ಮರ್ಯಾಮ್‌ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.