ಕ್ಯಾಪ್ಟನ್‌ ರಾಜ್‌ ಕುಮಾರ್‌ ಸಾಹಸ ಮೆರೆದ ನೌಕಾ ಕಮಾಂಡರ್‌. ಇವರು ತಮ್ಮ ಸೀ ಕಿಂಗ್‌  42ಸಿಹೆಲಿಕಾಪ್ಟರ್‌ ಅನ್ನು ಪ್ರವಾಹಕ್ಕೆ ಸಿಲುಕಿದ್ದ ಮನೆಯೊಂದರ ಚಾವಣಿಯ ಮೇಲೆ ಇಳಿಸಿ  ತೊಂದರೆಯಲ್ಲಿದ್ದ ಜನರನ್ನು ರಕ್ಷಿಸಿದ್ದಾರೆ.

ಕೊಚ್ಚಿ[ಆ.19]: ನೌಕಾ ಪಡೆಯ ಪೈಲಟ್‌ವೊಬ್ಬರು ಪ್ರವಾಹಕ್ಕೆ ಸಿಲುಕ್ಕಿದ್ದ ಮನೆಯ ಟೆರೇಸ್‌ ಮೇಲೆಯೇ ಹೆಲಿಕಾಪ್ಟರ್‌ ಇಳಿಸಿ 26 ಜನರನ್ನು ರಕ್ಷಿಸಿ ಸಾಹಸ ಮೆರದಿದ್ದಾರೆ.

ಕ್ಯಾಪ್ಟನ್‌ ರಾಜ್‌ ಕುಮಾರ್‌ ಸಾಹಸ ಮೆರೆದ ನೌಕಾ ಕಮಾಂಡರ್‌. ಇವರು ತಮ್ಮ ಸೀ ಕಿಂಗ್‌ 42ಸಿಹೆಲಿಕಾಪ್ಟರ್‌ ಅನ್ನು ಪ್ರವಾಹಕ್ಕೆ ಸಿಲುಕಿದ್ದ ಮನೆಯೊಂದರ ಚಾವಣಿಯ ಮೇಲೆ ಇಳಿಸಿ ತೊಂದರೆಯಲ್ಲಿದ್ದ ಜನರನ್ನು ರಕ್ಷಿಸಿದ್ದಾರೆ. ಇವರ ಸಾಧನೆಗೆ ಎಲ್ಲಡೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕೇರಳದ ಪಾಲಕ್ಕಾಡ್‌ನವರರಾದ ಇವರು ಓಖಿ ಚಂಡಮಾರುತದ ಸಂದರ್ಭದಲ್ಲಿ ಮಾಡಿದ ಅವಿರತ ಸಾಧನೆಗಾಗಿ ಶೌರ್ಯ ಪ್ರಶಸ್ತಿ ಪಡೆದುಕೊಂಡಿದ್ದರು.ಸೀ ಕಿಂಗ್‌ ಹೆಲಿಕಾಪ್ಟರ್‌ ನೌಕಾಪಡೆಯಲ್ಲಿ ಅತಿದೊಡ್ಡ ಹೆಲಿಕಾಪ್ಟರ್‌ ಆಗಿದ್ದು, ಇದನ್ನು ಇಳಿಸಲು ವಿಶಾಲವಾದ ಹೆಲಿಪ್ಯಾಡ್‌ನ ಅಗತ್ಯವಿದೆ.