ನವದೆಹಲಿ(ಸೆ.24): ಸೈಲ್ಲಿಂಗ್ ರೇಸ್ ನಿಂದ ಗಾಯಗೊಂಡು ಆಸ್ಟ್ರೇಲಿಯಾ ಹತ್ತಿರ ಹಿಂದೂ ಮಹಾಸಾಗರದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಭಾರತೀಯ ನೌಕ ಅಧಿಕಾರಿಯನ್ನು ಫ್ರೆಂಚ್ ಹಡಗೊಂದು ರಕ್ಷಿಸಿದೆ   16 ತಾಸುಗಳಲ್ಲೇ   ರಕ್ಷಿಸಿದೆ ಎಂದು  ರಕ್ಷಣಾ ಸಚಿವಾಲಯ ತಿಳಿಸಿದೆ.

ಭಾರತೀಯ ನೌಕಾಧಿಕಾರಿ ಅಭಿಲಾಷ್ ಟೊಮಿ ಸಂಕಷ್ಟಕ್ಕೆ ಸಿಲುಕಿದ ಅಧಿಕಾರಿ ಎನ್ನಲಾಗಿದೆ.  ಇವರು  ದಕ್ಷಿಣ ಹಿಂದೂ ಮಹಾಸಾಗರದಲ್ಲಿ  ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಪಾಲ್ಗೊಂಡಿದ್ದಾಗ ಗಾಯಗೊಂಡು,  ಮಹಾಸಾಗರಕ್ಕೆ ಬಿದಿದ್ದಾರೆ.

ತಕ್ಷಣ ಫ್ರೆಂಚ್ ಮೂಲದ ಹಡಗೊಂದು ಕಾರ್ಯಾಚರಣೆ ನಡೆಸಿ  ಅವರನ್ನು ಘಟನೆ ನಡೆದ 16 ತಾಸುಗಳಲ್ಲೇ ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ  ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.