ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಮತ್ತು ಅಕಾಲಿ ದಳದ ಮಾಜಿ ಶಾಸಕ ಪರ್ಗತ್ ಸಿಂಗ್ ನ.28ರಂದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಅಮರಿಂದರ್ ಸಿಂಗ್ ತಿಳಿಸಿದ್ದರು.

ನವದೆಹಲಿ(ನ.24): ಮಾಜಿ ಕ್ರಿಕೆಟರ್ ಮತ್ತು ಅವಾಜ್-ಇ-ಪಂಜಾಬ್ ಪಕ್ಷ ಸ್ಥಾಪನೆ ಮಾಡಿದ್ದ ನವಜೋತ್ ಸಿಂಗ್ ಸಿಧು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಮಾತನಾಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್, ‘‘ಈಗಾಗಲೆ ಬಿಜೆಪಿ ತ್ಯಜಿಸಿರುವ ಸಿಧು ಮತ್ತು ಅವರ ಪತ್ನಿ ನಮ್ಮೊಂದಿಗಿದ್ದಾರೆ,’’ ಎಂದು ಹೇಳಿದ್ದಾರೆ. ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಮತ್ತು ಅಕಾಲಿ ದಳದ ಮಾಜಿ ಶಾಸಕ ಪರ್ಗತ್ ಸಿಂಗ್ ನ.28ರಂದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಅಮರಿಂದರ್ ಸಿಂಗ್ ತಿಳಿಸಿದ್ದರು.

ಚುನಾವಣಾ ನೀತಿ ಸಂಹಿತೆ ಘೋಷಣೆ ಬಳಿಕ ಸಿಧು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗಿದೆ.