ಪಂಜಾಬ್ ಸಾಂಸ್ಕೃತಿಕ ಸಚಿವ ನವಜೋತ್ ಸಿಂಗ್ ಸಿಧು ಟಿವಿ ಕಾಮಿಡಿ ಶೋ ಒಂದರಲ್ಲಿ ಭಾಗವಹಿಸುವುದನ್ನು ಹೈಕೋರ್ಟ್ ಪ್ರಶ್ನಿಸಿದೆ.

ನವದೆಹಲಿ (ಏ.07): ಪಂಜಾಬ್ ಸಾಂಸ್ಕೃತಿಕ ಸಚಿವ ನವಜೋತ್ ಸಿಂಗ್ ಸಿಧು ಟಿವಿ ಕಾಮಿಡಿ ಶೋ ಒಂದರಲ್ಲಿ ಭಾಗವಹಿಸುವುದನ್ನು ಹೈಕೋರ್ಟ್ ಪ್ರಶ್ನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿಯೊಂದು ವಿಚಾರವೂ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ. ಶಿಷ್ಟಾಚಾರ, ನೈತಿಕತೆಯನ್ನು ಪಾಲಿಸಬೆಕು. ಮಂತ್ರಿಗಳೇ ನಿಯಮಗಳನ್ನು ಪಾಲಿಸದಿದ್ದರೆ ಅವರ ಕೆಳಗಿನವರು ನಿಯಮಗಳನ್ನು ಹೇಗೆ ಪಾಲಿಸುತ್ತಾರೆ ಎಂದು ಕೋರ್ಟ್ ಸಿಧುವನ್ನು ಪ್ರಶ್ನಿಸಿದೆ.

ನೀತಿ ಸಂಹಿತೆ ಹಾಗೂ 1952 ರ ಕಾನೂನು, ಕಚೇರಿಯಲ್ಲಿ ಕೆಲಸ ಮಾಡುವಷ್ಟು ಹೊತ್ತು ಯಾವುದೇ ಸಂಸದರಿರಲಿ, ಅಧಿಕಾರಿಗಳಿರಲಿ ಲಾಭೋದ್ದೇಶದಿಂದ ಅಥವಾ ಖಾಸಗಿ ವ್ಯವಹಾರಕ್ಕಾಗಿ ಬೇರೊಂದು ಕಚೇರಿ ಜೊತೆ ಕೈಜೋಡಿಸುವಂತಿಲ್ಲ ಎಂದು ಹೇಳುತ್ತದೆ ಎಂದು ಕೋರ್ಟ್ ಹೇಳಿದೆ.