ಚಂಡೀಗಢ : ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪತ್ನಿ ಮಾಜಿ ಸಚಿವೆ ನವಜೋತ್ ಕೌರ್ ಸಿಧುಗೆ ಚಂಡೀಗಢದಿಂದ ಲೋಕಸಭಾ ಟಿಕೆಟ್ ನೀಡುವ ಸಾಧ್ಯತೆ ಇದೆ. 

ನವಜೋತ್ ಕೌರ್ ಚಂಡೀಗಢದಿಂದ ಲೋಕಸಭೆಗೆ ಸ್ಪರ್ಧೆ ಮಾಡಲು ಬಯಸಿದ್ದು, ಈಗಾಗಲೇ ಅತ್ಯಧಿಕ ಸಂಖ್ಯೆಯ ಆಕಾಂಕ್ಷಿಗಳು ಇಲ್ಲಿಂದಲೇ ಚುನಾವಣೆ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ. 

ಅಲ್ಲದೇ ಕಾಂಗ್ರೆಸ್ ಮುಖಂಡರಾದ  ಮಾಜಿ ಕೇಂದ್ರ ಸಚಿವ ಪವನ್ ಕುಮಾರ್ ಬನ್ಸಾಲ್ ಹಾಗೂ ಮಾಜಿ ಕೇಂದ್ರ ಸಚಿವ ಮನೀಷ್ ತಿವಾರಿ ಅವರೂ ಕೂಡ ಇದೇ ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾರೆ.  ಸದ್ಯ ಬಿಜೆಪಿ ಸಂಸದೆ ಕಿರಣ್ ಕೇರ್ ಚಂಡೀಗಢ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.  

ಈಗಾಗಲೇ ನವಜೋತ್ ಕೌರ್ ತಮ್ಮ  ಅರ್ಜಿಯನ್ನು ಚಂಡೀಗಢ ಕಾಂಗ್ರೆಸ್ ಸಮಿತಿಗೆ ಗುಜರಾಯಿಸಿದ್ದು,  ಮುಂದಿನ ಲೋಕಸಭಾ ಚುನಾವಣೆಗೆ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿದ್ದೇನೆ ಎಂದು ತಮ್ಮ ಅರ್ಜಿಯ ಮೂಲಕ ತಿಳಿಸಿದ್ದಾರೆ.  ಅಲ್ಲದೇ ತಮ್ಮ ಕಾರ್ಯದ ಬಗ್ಗೆಯೂ ಕೂಡ ಈ ಅರ್ಜಿಯಲ್ಲಿ ಮಾಹಿತಿಯನ್ನು ಲಗತ್ತಿಸಿದ್ದಾರೆ.