ನವಜೋತ್ ಸಿಂಗ್ ಸಿಧು ಬಿಜೆಪಿಗೆ ರಾಜಿನಾಮೆ ನೀಡಿ ಒಂದು ತಿಂಗಳಾಗುವುದರೊಳಗಾಗಿ ಅವರ ಪತ್ನಿ ನವಜೋತ್ ಕೌರ್ ಬಿಜೆಪಿಗೆ ಗುಡ್'ಬೈ ಹೇಳಿದ್ದಾರೆ.
ಚಂಢೀಗಡ(ಅ.08): ಖ್ಯಾತ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರ ಪತ್ನಿ ಶಾಸಕಿ ನವಜೋತ್ ಕೌರ್ ಇಂದು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ನವಜೋತ್ ಸಿಂಗ್ ಸಿಧು ಬಿಜೆಪಿಗೆ ರಾಜಿನಾಮೆ ನೀಡಿ ಒಂದು ತಿಂಗಳಾಗುವುದರೊಳಗಾಗಿ ಅವರ ಪತ್ನಿ ನವಜೋತ್ ಕೌರ್ ಬಿಜೆಪಿಗೆ ಗುಡ್'ಬೈ ಹೇಳಿದ್ದಾರೆ.
ಕೌರ್ ರಾಜಿನಾಮೆ ಪತ್ರವನ್ನು ಪಂಜಾಬಿನ ಬಿಜೆಪಿ ರಾಜ್ಯಧ್ಯಕ್ಷರಾದ ಕೇಂದ್ರ ಸಚಿವ ವಿಜಯ್ ಸಂಪ್ಲಾ ಅಂಗೀಕರಿಸಿದ್ದಾರೆ.
ಪಂಜಾಬ್ ವಿಧಾನಸಭೆ ಮೇಲೆ ಕಣ್ಣಿಟ್ಟಿರುವ ಸಿಧು ಬಿಜೆಪಿಯಿಂದ ಹೊರಬಂದು, 'ಅವಾಜ್-ಇ-ಪಂಜಾಬ್' ಎಂಬ ಪಕ್ಷವನ್ನು ಸ್ಥಾಪಿಸಿದ್ದಾರೆ. ಹೀಗಾಗಿ ಕೌರ್ ರಾಜಿನಾಮೆ ಅನಿರೀಕ್ಷಿತವೇನಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.