ಸಾಂಸ್ಕೃತಿಕ ನಗರಿಯಲ್ಲಿ ‘ನಾವಿಕ’ ವಿಶ್ವ ಕನ್ನಡ ಸಮ್ಮೇಳನ

Navika Kannada Sammelana to be held on Aug 4 and 5 In Cultural City Mysuru
Highlights

ಅನಿವಾಸಿ ಕನ್ನಡಿಗರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗುವ ನಾವಿಕ [ನಾರ್ತ್‌ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಷನ್] ವಿಶ್ವ ಕನ್ನಡ ಸಮ್ಮೇಳನ ಈ ಸಾರಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಗಸ್ಟ್ 4 ಮತ್ತು 5 ರಂದು ನಡೆಯಲಿದೆ.

ಬೆಂಗಳೂರು [ಜೂ.22] ಅನಿವಾಸಿ ಕನ್ನಡಿಗರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗುವ ನಾವಿಕ [ನಾರ್ತ್‌ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಷನ್] ವಿಶ್ವ ಕನ್ನಡ ಸಮ್ಮೇಳನ ಈ ಸಾರಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಗಸ್ಟ್ 4 ಮತ್ತು 5 ರಂದು ನಡೆಯಲಿದೆ.

ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಸಮ್ಮೇಳನ ನಡೆಯಲಿದೆ. ಉತ್ತರ ಅಮೇರಿಕಾದಲ್ಲಿ ಅಸಂಖ್ಯಾತ ಕನ್ನಡಿಗರು ನೆಲೆಸಿದ್ದು ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ರಜಾ ದಿನ ಕಳೆಯಲು ಕರ್ನಾಟಕ್ಕೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿಯೇ ಸಮ್ಮೇಳನ ಆಯೋಜನೆ ಮಾಡಲಾಗುತ್ತದೆ. 2011,2014 ಮತ್ತು 2016 ರಲ್ಲಿ ಬೆಂಗಳೂರಿನಲ್ಲಿ ಸಮ್ಮೇಳನ ನಡೆದಿತ್ತು.

'ನಾವಿಕೋತ್ಸವ-ವಿಶ್ವ ಕನ್ನಡ ಉತ್ಸವ' ಎಂಬ ಹೆಸರನಲ್ಲಿ ಸಮ್ಮೇಳನ ನಡೆಯುತ್ತಿದ್ದು ಬೆಂಗಳೂರು ಮತ್ತು ಅಮೆರಿಕ ವಿಭಾಗಗಕ್ಕೆ ಸಮಿತಿ ನೇಮಕ ಮಾಡಿಕೊಳ್ಳಲಾಗಿದೆ. ಸುರೇಶ್ ರಾಮಚಂದ್ರ ನೇತೃತ್ವದಲ್ಲಿ ಕಾರ್ಯಕ್ರಮದ ಸಿದ್ಧತೆಗಳು ಆರಂಭವಾಗಿದೆ. ಹೆಚ್ಚಿನ ಮಾಹಿತಿಗೆ  ಭಾರತದ ಪರವಾಗಿ ಎಂ.ಕೃಷ್ಣಮೂರ್ತಿ 9945246028 ಮತ್ತು ಅಮೆರಿಕದ ಪರವಾಗಿ ಸುರೇಶ್ ರಾಮಚಂದ್ರ 12403932945 ಸಂಪರ್ಕಿಸಲು ಕೋರಲಾಗಿದೆ. 

ಹೆಚ್ಚಿನ ವಿವರಕ್ಕೆ ಈ ಜಾಲತಾಣದ ಕೊಂಡಿ ಬಳಸಬಹುದು

 

loader