ಹಾವಿನ ಹೆಡೆಗೆ ಮುತ್ತಿಕ್ಕುತ್ತಿರುವ ಫೋಟೋ ತೆಗೆಸಿಕೊಳ್ಳಲು ಹೊರಟಿದ್ದಾನೆ. ಅಷ್ಟರಲ್ಲೇ, ಹಾವು ಏಕಾಏಕಿ ತಿರುಗಿ, ಸೋಮನಾಥ್‌'ನ ಎದೆಗೆ ಕಚ್ಚಿದ್ದರಿಂದ, ಆತ ಸಾವಿಗೀಡಾಗಿದ್ದಾನೆ.
ಮುಂಬೈ(ಫೆ.06): ಹಾವು ಹಿಡಿಯುವುದರಲ್ಲಿ ನಿಪುಣನಾಗಿದ್ದ ಯುವಕನೊಬ್ಬ ಅದಕ್ಕೆ ಮುತ್ತು ನೀಡಲು ಹೋಗಿ ಜೀವಕ್ಕೇ ಕುತ್ತು ತಂದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.
ಸಿಬಿಡಿ ಬೇಲಾಪುರ ನಿವಾಸಿ ಸೋಮನಾಥ್'ಗೆ, ವ್ಯಕ್ತಿಯೊಬ್ಬರ ಕಾರಿನಲ್ಲಿ ನಾಗರಹಾವೊಂದು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸೋಮನಾಥ್ ಅಲ್ಲಿಗೆ ತೆರಳಿ, ಹಾವನ್ನು ಜೀವಂತವಾಗಿ ಸೆರೆಹಿಡಿದಿದ್ದಾನೆ.
ನಂತರ, ಹಾವಿನ ಹೆಡೆಗೆ ಮುತ್ತಿಕ್ಕುತ್ತಿರುವ ಫೋಟೋ ತೆಗೆಸಿಕೊಳ್ಳಲು ಹೊರಟಿದ್ದಾನೆ. ಅಷ್ಟರಲ್ಲೇ, ಹಾವು ಏಕಾಏಕಿ ತಿರುಗಿ, ಸೋಮನಾಥ್'ನ ಎದೆಗೆ ಕಚ್ಚಿದ್ದರಿಂದ, ಆತ ಸಾವಿಗೀಡಾಗಿದ್ದಾನೆ.
ಈತ ಈವರೆಗೆ 100ಕ್ಕೂ ಹೆಚ್ಚು ವಿಷಜಂತುಗಳನ್ನು ಸೆರೆಹಿಡಿದಿದ್ದಾನೆ. ಕಳೆದ 12 ವರ್ಷಗಳಲ್ಲಿ ಹಾವಿನಿಂದಲೇ ಕಚ್ಚಿಸಿಕೊಂಡು ಮೃತಪಟ್ಟ ಇಂಥವರ ಪೈಕಿ ಸೋಮನಾಥ್ 31ನೆಯವ ಎನ್ನಲಾಗಿದೆ.
