ಪಣಜಿ(ಸೆ.13): ಭಾರತೀಯ ನೌಕಾಸೇನೆಗಾಗಿ ತಯಾರಿಸಲಾಗಿರುವ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ನ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಗೋವಾದಲ್ಲಿ ತಯಾರಿಸಲಾಗಿದ್ದ ಯುದ್ಧ ಹಡಗು ಮಾದರಿಯ ಚಿಕ್ಕ ಲ್ಯಾಂಡಿಂಗ್ ರನ್‌ವೇಯಲ್ಲಿ ತೇಜಸ್ ಅತ್ಯಂತ ವೇಗದಲ್ಲಿ ಇಳಿಯುವಲ್ಲಿ ಯಶಸ್ವಿಯಾಯಿತು.

ಈ ಮೂಲಕ ಅತ್ಯಂತ ವೇಗವಾಗಿ ಕಡಿಮೆ ರನ್‌ವೇ ಸ್ಥಳದಲ್ಲಿ ಸುರಕ್ಷಿತವಾಗಿ ಇಳಿಯಬಲ್ಲ ಯುದ್ಧ ವಿಮಾನಗಳನ್ನು ಹೊಂದಿರುವ ಅಮೆರಿಕ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್ ಹಾಗೂ ಚೀನಾ ನಂತರದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಮಲ್ಟಿರೋಲ್ ಫೈಟರ್ ಜೆಟ್ ಅತ್ಯಂತ ವೇಗವಾಗಿ ಕಡಿಮೆ ಅಂತರದ ರನ್‌ವೇನಲ್ಲಿ ಇಳಿಯುವಂತೆ ಮಾಡಲು, ಲ್ಯಾಂಡಿಂಗ್ ವೇಳೆ ತಂತಿಯೊಂದನ್ನು ಉರುಳಿಸಲಾಗುತ್ತದೆ. ಇದು ಯುದ್ಧ ಹಡಗಿನ ರನ್‌ವೇ ಗೆ ಸೇರಿ ವಿಮಾನವನ್ನು ಅತ್ಯಂತ ತ್ವರಿತವಾಗಿ ಲ್ಯಾಂಡ್ ಆಗುವಂತೆ ಮಾಡುತ್ತದೆ.