ಪ್ರಧಾನಿ ಮೋದಿ ಭೇಟಿ : 8 ಜಿಲ್ಲೆಗಳಲ್ಲಿ ಶಾಲೆಗೆ ರಜೆ

First Published 4, May 2018, 10:36 AM IST
Narendra Modi to visit Nepal
Highlights

ನೇಪಾಳದ ಜನಕಪುರದ ಜಾನಕಿ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಮೇ ೧೧ಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ, ಪ್ರಾಂತ್ಯ ನಂ.2ರಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. 

ಕಾಠ್ಮಂಡು: ನೇಪಾಳದ ಜನಕಪುರದ ಜಾನಕಿ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಮೇ 11ಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ, ಪ್ರಾಂತ್ಯ ನಂ.2ರಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ನೇಪಾಳ ಪ್ರಾಂತ್ಯ ನಂ. 2ರ ಎಲ್ಲ 8 ಜಿಲ್ಲೆಗಳಿಂದ 50,000 ಮಂದಿ ಬರ್ಹಾಬಿಗಾ ಮೈದಾನದಲ್ಲಿ ಮೋದಿಯವರ ಸನ್ಮಾನದಲ್ಲಿ ಭಾಗಿಯಾಗಲಿದ್ದಾರೆ. 

ಹೀಗಾಗಿ ಇಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ಭಾರತದ ಗಡಿಗೆ ಪಕ್ಕದಲ್ಲಿರುವ ಜನಕಪುರದಲ್ಲಿ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿದೆ. ಪಟನಾದಿಂದ ಜನಕಪುರಕ್ಕೆ, ಅಲ್ಲಿಂದ ಮಸ್ತಂಗ್ ಮತ್ತು ಕಠ್ಮಂಡುಗೆ ಅವರು ಭೇಟಿ ನೀಡಲಿದ್ದಾರೆ.

loader