ಕಪ್ಪು ಹಣ ನಮ್ಮ ಆರ್ಥಿಕ ವ್ಯವಸ್ಥೆಯನ್ನ ಹಾಳು ಮಾಡಿದೆ.. ದೇಶದ ಜನತೆಗೆ ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ಬೇಕಿದೆ.. ಶುದ್ಧಿ ಯಜ್ಞ ದೇಶದ ಜನರಿಂದ ಯಶಸ್ವಿಯಾಗಿದೆ: ಪ್ರಧಾನಿ ಮೋದಿ
ನವದೆಹಲಿ(ಡಿ. 31): ನೋಟ್ ಅಮಾನ್ಯೀಕರಣದ ಬಳಿಕ ಅದರ ಪರಿಣಾಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಮೊದಲೇ ರೆಕಾರ್ಡ್ ಮಾಡಲಾದ ವಿಡಿಯೋವನ್ನು ಮಾಧ್ಯಮದಲ್ಲಿ ಪ್ರಸಾರ ಮಾಡಲಾಯಿತು. ನೋಟ್ ಬ್ಯಾನ್'ನಿಂದ ಕಾಳಧನಿಕರ ನಿದ್ದೆಗೆಟ್ಟಿದೆ ಎಂದು ಪ್ರಧಾನಿ ಮೋದಿ ಇಂದು ಹೇಳಿದ್ದಾರೆ. ಅಲ್ಲದೇ, ಸರಕಾರದ ಕ್ರಮವನ್ನು ಸ್ವಾಗತಿಸಿರುವ ದೇಶದ ಜನತೆಗೆ ಅವರು ಕೃತಜ್ಞತೆ ಅರ್ಪಿಸಿದ್ದಾರೆ.
ಮೋದಿ ಭಾಷಣದ ಹೈಲೈಟ್ಸ್:
* ಗರ್ಭಿಣಿಯರ ಆರೈಕೆಗಾಗಿ 6 ಸಾವಿರ ರೂ. ಕೊಡುಗೆ; ಅವರ ಖಾತೆಗಳಿಗೆ ನೇರವಾಗಿ ಆ ದುಡ್ಡು ಜಮೆ
* 2 ಹೊಸ ಯೋಜನೆ ಘೋಷಣೆ: ಹಳ್ಳಿಗಳಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆ ಹಾಗೂ ನಗರಗಳಲ್ಲಿ ಗೃಹ ನಿರ್ಮಾಣ ಯೋಜನೆಗೆ ಸುಲಭ ಬಡ್ಡಿದರದ ಸಾಲ
* ನಗರದಲ್ಲಿ 9 ಲಕ್ಷ ಗೃಹಸಾಲಕ್ಕೆ ಶೇ.4ರಷ್ಟು ಬಡ್ಡಿದರ ರಿಯಾಯಿತಿ; 12 ಲಕ್ಷ ಸಾಲಕ್ಕೆ ಶೇ.3ರಷ್ಟು ಬಡ್ಡಿದರ ರಿಯಾಯಿತಿ
* ಹಳ್ಳಿಗಳಲ್ಲಿ ಗೃಹ ನಿರ್ಮಾಣಕ್ಕೆ ಶೇ.3ರಷ್ಟು ಬಡ್ಡಿದರ ರಿಯಾಯಿತಿ; ರೈತರ ಸಾಲದ 60 ದಿನಗಳ ಬಡ್ಡಿಯನ್ನು ಸರ್ಕಾರ ನೀಡಲಿದೆ
* ರೈತರ 9 ಲಕ್ಷ ಸಾಲಕ್ಕೆ 4%, 12 ಲಕ್ಷ ಗೃಹ ಸಾಲಕ್ಕೆ 3% ಬಡ್ಡಿದರ ರಿಯಾಯಿತಿ
* 3 ತಿಂಗಳಲ್ಲಿ 3 ಕೋಟಿ ಕಿಸಾನ್ ಕಾರ್ಡ್'ಗಳನ್ನು RUPAY ಕಾರ್ಡ್ ಆಗಿ ಪರಿವರ್ತನೆ
* 24 ಲಕ್ಷ ಜನ ಮಾತ್ರ ವಾರ್ಷಿಕ 10 ಲಕ್ಷಕ್ಕಿಂತ ಹೆಚ್ಚು ಆದಾಯ; ತೆರಿಗೆ ಕಟ್ಟುತ್ತಿರುವುದು 24 ಲಕ್ಷ ಜನ ಮಾತ್ರ... ಈ ಪ್ರಾಮಾಣಿಕತೆ ಹೆಚ್ಚಲು ಇನ್ನೂ ಶ್ರಮಿಸಬೇಕು
* ನಿಮ್ಮಲ್ಲಿ ಒಂದು ಪ್ರಶ್ನೆ ಕಾಡುತ್ತಿರಬಹುದು.. ಕಾಳಧನಿಕರನ್ನು ಸರ್ಕಾರ ಏನು ಮಾಡುತ್ತೆ? ಈ ಪ್ರಶ್ನೆಗೆ ಕಾನೂನಿನ ಉತ್ತರ ಕೊಡುತ್ತೇವೆ... ಕಾನೂನು ತನ್ನ ಕೆಲಸವನ್ನು ಮಾಡುತ್ತೆ
* ಎಲ್ಲ ಕಳ್ಳ ವ್ಯವಹಾರಗಳನ್ನೂ ಕಪ್ಪುಹಣ ನಿಯಂತ್ರಿಸುತ್ತಿತ್ತು, ಈ ಕಳ್ಳ ವ್ಯವಹಾರಗಳಿಗೆ ಈಗ ಬ್ರೇಕ್ ಬಿದ್ದಿದೆ
* ಈ ಸರ್ಕಾರ ಸಜ್ಜನರು, ಪ್ರಾಮಾಣಿಕರ ಪರವಾಗಿದೆ.. ದುರ್ಜನರನ್ನೂ ಪ್ರಾಮಾಣಿಕ ಹಾದಿಗೆ ತರುವ ಯತ್ನದಲ್ಲಿದ್ದೇವೆ
* ಕಾಳಧನಿಕರ ಮುಂದಿನ ದಾರಿ ಬಂದ್ ಮಾಡಿದ್ದೇವೆ... ತಪ್ಪು ಮಾಡಿದವರು ಸರಿದಾರಿಗೆ ಬರಲೇಬೇಕಾಗುತ್ತೆ
* ಬ್ಯಾಂಕ್ ವ್ಯವಸ್ಥೆ ಸಹಜ ಸ್ಥಿತಿಗೆ ಬರಲಿದೆ... ಎಲ್ಲಾ ಬ್ಯಾಂಕ್ ಸಿಬ್ಬಂದಿಗೂ ನನ್ನ ಧನ್ಯವಾದ... ಎಲ್ಲರೂ ಹಗಲು - ಇರುಳೂ ಶ್ರಮಿಸಿದ್ದಾರೆ. ಇದು ಪ್ರಶಂಸಾರ್ಹ
* ಆದರೆ, ಬ್ಯಾಂಕ್ ಸಿಬ್ಬಂದಿ ಬಗ್ಗೆ ಕೆಲವು ಗಂಭೀರ ಆರೋಪಗಳೂ ಹೊರಬಂದಿವೆ... ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಆರೋಪ ಬಂದಿವೆ... ಇಂಥವರನ್ನು ನಾವು ಶಿಕ್ಷಿಸದೆ ಬಿಡುವುದಿಲ್ಲ
* ಭ್ರಷ್ಟಾಚಾರ, ಕಪ್ಪುಹಣ ದೇಶದ ಅತಿದೊಡ್ಡ ಶತ್ರು... ಕಾಳಧನಿಕರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ
* ಅಮಾಯಕರು ಭ್ರಷ್ಟಾಚಾರಕ್ಕೆ ಬಲಿಯಾಗುತ್ತಿದ್ದಾರೆ... ಜನರಿಗೆ ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ಬೇಕಿದೆ. ಜನ ಭ್ರಷ್ಟಾಚಾರದಿಂದ ಮುಕ್ತಿ ಬಯಸಿದ್ದರು... ಅಮಾಯಕರು ಭ್ರಷ್ಟಾಚಾರದಿಂದ ನರಳುತ್ತಿದ್ದರು...
* ಭ್ರಷ್ಟಾಚಾರವನ್ನು ಸೋಲಿಸಲು ಹೋರಾಡಿದ್ದೇವೆ... ನಿಜವಾದ ಸಂಕಲ್ಪವನ್ನು ಭಾರತೀಯರು ಗುರುತಿಸಿದರು
* ಇದು ದೇಶದ 125 ಕೋಟಿ ಜನರ ಗೆಲುವು.... ನಿಮ್ಮ ಶ್ರಮ, ನಿಮ್ಮ ಬೆವರು ವ್ಯರ್ಥವಾಗಲು ಬಿಡುವುದಿಲ್ಲ.. ಯಾವುದೇ ಕಾರಣಕ್ಕೂ ಕಪ್ಪು ಹಣ ಚಲಾವಣೆಗೆ ಅವಕಾಶ ಕೊಡಲ್ಲ
* ದೀಪಾವಳಿ ನಂತರ ನಾನು ಕಪ್ಪು ಹಣದ ಕ್ರಮ ಕೈಗೊಂಡಿದ್ದೇನೆ... ಜನರು ನನ್ನ ಹೋರಾಟಕ್ಕೆ ಕೈ ಜೋಡಿಸಿದ್ದಾರೆ... ಒಳ್ಳೆಯ ಉದ್ದೇಶಕ್ಕಾಗಿ, ಸತ್ಯಕ್ಕಾಗಿ ದೇಶ ಒಂದಾಗಿದೆ
* ಹೊಸ ಕನಸಿನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ... ಜನರ ಬೆಂಬಲ ಕಂಡು ಮೂಕವಿಸ್ಮಿತನಾಗಿದ್ದೇನೆ
* ನೋಟ್ ಬ್ಯಾನ್ ಆಗಿ ಇಂದಿಗೆ 53 ದಿನ... ದೇಶವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲು ಶ್ರಮಿಸಿದ್ದೇವೆ... ಈಗ ಮಾಡಿದ ಶುದ್ಧಿಯಿಂದ ಹಲವು ವರ್ಷ ಫಲ ಸಿಗುತ್ತೆ
* ಕಪ್ಪು ಹಣ ನಮ್ಮ ಆರ್ಥಿಕ ವ್ಯವಸ್ಥೆಯನ್ನ ಹಾಳು ಮಾಡಿದೆ.. ದೇಶದ ಜನತೆಗೆ ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ಬೇಕಿದೆ.. ಶುದ್ಧಿ ಯಜ್ಞ ದೇಶದ ಜನರಿಂದ ಯಶಸ್ವಿಯಾಗಿದೆ
