ದಕ್ಷಿಣ ಭಾರತದವರ ಮೇಲೆ ಹೆಚ್ಚುತ್ತಿರುವ ಮೋದಿ ಪ್ರೀತಿ ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Aug 2018, 3:17 PM IST
Narendra Modi South Indian Love Prashath natu says at India gate
Highlights

 ಚುನಾವಣೆ ಹತ್ತಿರ ಬರುತ್ತಿದ್ದಂತೆ ಪತ್ರಕರ್ತರನ್ನು ಆಫ್‌ ದಿ ರೆಕಾರ್ಡ್ ಹರಟೆಗೆ ಮನೆಗೆ ಕರೆಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೇವಲ ಪ್ರಾದೇಶಿಕ ಮುದ್ರಣ ಮಾಧ್ಯಮದ ಪತ್ರಕರ್ತರನ್ನು ಕರೆಸಿಕೊಳ್ಳುತ್ತಿದ್ದಾರೆ.

ನಾಲ್ಕೂವರೆ ವರ್ಷಗಳಲ್ಲಿ ಒಮ್ಮೆಯೂ ಅಧಿಕೃತ ಪತ್ರಿಕಾಗೋಷ್ಠಿ ಕರೆಯದ ಮೋದಿ ಸಾಹೇಬರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಪತ್ರಕರ್ತರನ್ನು ಆಫ್‌ದಿ ರೆಕಾರ್ಡ್ ಹರಟೆಗೆ ಮನೆಗೆ ಕರೆಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೇವಲ ಪ್ರಾದೇಶಿಕ ಮುದ್ರಣ ಮಾಧ್ಯಮದ ಪತ್ರಕರ್ತರನ್ನು ಕರೆಸಿಕೊಳ್ಳುತ್ತಿದ್ದಾರೆ. ಮೊದಲಿಗೆ ಮರಾಠಿ, ಗುಜರಾತಿ ನಂತರ ತಮಿಳು ಸಂಪಾದಕರನ್ನು ಕರೆಸಿ ಮಾತನಾಡಿರುವ ಮೋದಿ, ನೋ ಪಾಲಿಟಿಕ್ಸ್ ಬರೀ ಯೋಜನೆಗಳ ಬಗ್ಗೆ ಮಾತ್ರ ಮಾತು ಎಂದು
ಹೇಳಿ ಬಿಡುತ್ತಾರೆ. ಸ್ವಲ್ಪವಾದರೂ ಪಾಲಿಟಿಕ್ಸ್ ಸುದ್ದಿ ಹೆಕ್ಕಿ ತೆಗೆಯಬೇಕಾದ ಅನಿವಾರ್ಯತೆ ಇರುವ ಹಿರಿಯ ಪತ್ರಕರ್ತರು ಹೆಚ್ಚು ಏನನ್ನೂ ಬರೆಯಲು ಸಿಗದ ಆರ್‌ಎಸ್‌ಎಸ್ ಯೋಜನಾ ಪ್ರಚಾರ ತರಹದ ಮಾತುಗಳಿಂದ ಸ್ವಲ್ಪ ನಿರಾಸೆ ಆಗಿರುವುದು ನಿಜ.

ಎಲ್ಲವೂ ಪೋಸ್ಟಿಂಗ್‌ಗಾಗಿ!
ಶೀಘ್ರದಲ್ಲಿ ನಿವೃತ್ತಿ ಆಗಲಿರುವ ಅರೆಸೇನಾ ಪಡೆಯ ಮುಖ್ಯಸ್ಥ ಒಬ್ಬರು ದಿನವೂ ಎರಡೆರಡು ಬಾರಿ ಲೋಧಿ ಗಾರ್ಡನ್‌ಗೆ ಬರುತ್ತಾ ಸುದ್ದಿಯಲ್ಲಿದ್ದಾರೆ. ಪ್ರಧಾನಿ ಕಾರ್ಯಾಲಯದ ಹಿರಿಯ ಅಧಿಕಾರಿ ಒಬ್ಬರು ದಿನವೂ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು ಲೋಧಿ ಗಾರ್ಡನ್‌ಗೆ ಬರುವುದನ್ನು ತಿಳಿದುಕೊಂಡು, ತಾನೂ ಬರಲು ಶುರು ಮಾಡಿದರಂತೆ. ಇದಕ್ಕಾಗಿ ಪ್ಯಾರಾ ಮಿಲಿಟರಿಯ ಕಾನ್‌ಸ್ಟೇಬಲ್ ಒಬ್ಬರನ್ನು ಅಧಿಕಾರಿ ಮನೆ ಹೊರಗೆ ಇಟ್ಟಿದ್ದ ಸಾಹೇಬರು ಅಧಿಕಾರಿ
ಮನೆ ಬಿಟ್ಟ ತಕ್ಷಣ ತಾನು ಮನೆಯಿಂದ ಹೊರಟು ಗಾರ್ಡನ್‌ನಲ್ಲಿ ಪ್ರತ್ಯಕ್ಷರಾಗುತ್ತಿದ್ದರಂತೆ. ಇದೆಲ್ಲ ಗೊತ್ತಾಗಿ ಪಿಎಂಒ ಅಧಿಕಾರಿ ಲೋಧಿ ಗಾರ್ಡನ್‌ನಲ್ಲಿ ಎಲ್ಲರ ಎದುರೇ ಅರೆಸೇನಾ ಪಡೆ ಮುಖ್ಯಸ್ಥನ ಕ್ಲಾಸ್ ತೆಗೆದುಕೊಂಡರಂತೆ.

[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]

loader