ಮೋದಿ ಮೂರು ಬಾರಿ ಗೆದ್ದರೆ ಮಾತ್ರ ಭಾರತಕ್ಕೆ ಉಳಿಗಾಲ

First Published 22, Jun 2018, 2:01 PM IST
Narendra Modi is best PM India Ever had
Highlights

ಮೋದಿಯನ್ನ ದ್ವೇಷ ಮಾಡುವ ಬದಲು ಅವರ ಕೆಲಸವನ್ನು ಪ್ರೀತಿಸಿ. ಹಿಂದೆ ಇದ್ದ ಯುಪಿಎ ಸರ್ಕಾರ  ಏನು ಸಾಧನೆ‌ ಮಾಡಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾವುದೇ ಒಂದು ಕೆಲಸ ಮಾಡಲು ಮೇಡಂ ಅಂತಾ ಅವರ ಹಿಂದೆ‌ ಹೋಗ್ತಿದ್ರಿ. ಇಂಥವರು ಬೇಕಾ ಅಥವಾ  ದೇಶದ ಅಭಿವೃದ್ಧಿ ಮಾಡುವವರು ಬೇಕಾ? ಎಂದು ಪ್ರಧಾನಿಯನ್ನು ಕಾರ್ಯವನ್ನು ಶ್ಲಾಘಿಸಿದ ಸಾಹಿತಿ ಎಸ್.ಎಲ್.ಭೈರಪ್ಪ ಮತ್ತೆ ಹೇಳಿದ್ದೇನು?

ಮೈಸೂರು [ಜೂ.22]: ಪ್ರಧಾನಿ ಮೋದಿ ಒಂದು ಬಾರಿಯಲ್ಲ ಮೂರು ಬಾರಿ ಗೆದ್ದರೆ ಮಾತ್ರ ಭಾರತಕ್ಕೆ ಉಳಿಗಾಲ ಎಂದು ಸರಸ್ವತಿ ಸನ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್. ಭೈರಪ್ಪ ತಿಳಿಸಿದ್ದಾರೆ.

ಮೈಸೂರಿನ ಕುವೆಂಪು ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ನಾಲ್ಕು ವರ್ಷಗಳಲ್ಲಿ ಭಾರತವನ್ನ ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಮುಂದಿನ ಭವಿಷ್ಯ ಭಾರತವನ್ನ ಕಟ್ಟಲು ಶ್ರಮಿಸಿದ್ದಾರೆ. ಎರಡು ಮೂ‌ರು ಬಣಗಳು ಸೇರಿ ಮೋದಿ ಸೋಲಿಸಲು ಪಣ ತೊಟ್ಟಿವೆ.

ಮೋದಿಯನ್ನ ಸೋಲಿಸಿದರೆ ನಮ್ಮ ಮೂರ್ಖತನದ ಪರಮಾವಧಿ. ನಮ್ಮ‌ ಶತ್ರು ರಾಷ್ಟ್ರಗಳಾದ ಚೀನಾ‌ ಮತ್ತು ಪಾಕಿಸ್ತಾನ ಸುತ್ತಮುತ್ತಲಿನ ರಾಷ್ಟ್ರಗಳ ಪ್ರೀತಿ ವಿಶ್ವಾಸ ಗಳಿಸಲು ಯಶಸ್ವಿಯಾಗಿದ್ದಾರೆ ಎಂದು ಮೋದಿ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೋದಿಯನ್ನ ದ್ವೇಷ ಮಾಡುವ ಬದಲು ಅವರ ಕೆಲಸವನ್ನು ಪ್ರೀತಿಸಿ. ಹಿಂದೆ ಇದ್ದ ಯುಪಿಎ ಸರ್ಕಾರ  ಏನು ಸಾಧನೆ‌ ಮಾಡಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾವುದೇ ಒಂದು ಕೆಲಸ ಮಾಡಲು ಮೇಡಂ ಅಂತಾ ಅವರ ಹಿಂದೆ‌ ಹೋಗ್ತಿದ್ರಿ. ಇಂಥವರು ಬೇಕಾ ಅಥವಾ  ದೇಶದ ಅಭಿವೃದ್ಧಿ ಮಾಡುವವರು ಬೇಕಾ? ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಹಾಗೂ ಮೈಸೂರಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತುಕತೆ ನಡೆಸಿ ಕೇಂದ್ರದ ನಾಲ್ಕು ವರ್ಷದ ಯಶಸ್ವಿ ಯೋಜನೆಗಳ ಕೈಪಿಡಿ ನೀಡಿದರು.

loader