ಮೈಸೂರು ಜಿಲ್ಲೆಯ ನಂಜನಗೂಡಿನ ಆರಾಧ್ಯದೈವ ಶ್ರೀ ನಂಜುಂಡೇಶ್ವರನ ರಥೋತ್ಸವದ ವೇಳೆ ಅವಘಡ ಸಂಭವಿಸಿದೆ. ಪ್ರಸಿದ್ಧ ಶ್ರೀಕಂಠಸ್ವಾಮಿ ರಥೋತ್ಸವದ ವೇಳೆ ರಥದ ಚಕ್ರ ಮಣ್ಣಿನ ಹೂಳಿನಲ್ಲಿ ಸಿಲುಕಿಕೊಂಡಿದೆ.

ಮೈಸೂರು(ಎ.07): ಮೈಸೂರು ಜಿಲ್ಲೆಯ ನಂಜನಗೂಡಿನ ಆರಾಧ್ಯದೈವ ಶ್ರೀ ನಂಜುಂಡೇಶ್ವರನ ರಥೋತ್ಸವದ ವೇಳೆ ಅವಘಡ ಸಂಭವಿಸಿದೆ. ಪ್ರಸಿದ್ಧ ಶ್ರೀಕಂಠಸ್ವಾಮಿ ರಥೋತ್ಸವದ ವೇಳೆ ರಥದ ಚಕ್ರ ಮಣ್ಣಿನ ಹೂಳಿನಲ್ಲಿ ಸಿಲುಕಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಂಜನಗೂಡಿನ ಅಂಗಡಿ ಬೀದಿಯಲ್ಲಿ ಈ ಅವಘಡ ಸಂಭವಿಸಿದ್ದು, ಜೆಸಿಬಿ ಹಾಗೂ ಕ್ರೇನ್​​​ ಮೂಲಕ ರಥವನ್ನು ಮೇಲೆತ್ತುವ ಕಾರ್ಯ ಮಾಡಲಾಗ್ತಿದೆ. ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರಥ ಸಾಗುವ ಹಾದಿಯಲ್ಲಿ ಮಣ್ಣು ಸಡಿಲಗೊಂಡ ಕಾರಣ, ಬೃಹತ್ ರಥ ಮಣ್ಣಿನ ಹೂಳಿನಲ್ಲಿ ಸಿಲುಕಿಕೊಂಡಿದೆ.