ನಂಜನಗೂಡು ಉಪ ಚುನಾವಣೆ ಸಿಎಂ ಸಿದ್ದರಾಮಯ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಲೋಕೋಪಯೋಗಿ ಸಚಿವ ಎಚ್. ಸಿ. ಮಹದೇವಪ್ಪರನ್ನು ಕಣಕ್ಕಿಳಿಸಲು ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಶ್ರೀನಿವಾಸ್ ಪ್ರಸಾದ್ ಗೆ ಪ್ರಬಲ ಪ್ರತಿಸ್ಪರ್ಧಿ ಅಭ್ಯರ್ಥಿ ಸಿಗದ ಹಿನ್ನೆಲೆಯಲ್ಲಿ ಮಹದೇವಪ್ಪರನ್ನು ನಿಲ್ಲಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಅಂತ ಮೂಲಗಳು ತಿಳಿಸಿವೆ.
ಮೈಸೂರು(ಜ.20): ನಂಜನಗೂಡು ಉಪ ಚುನಾವಣೆ ಸಿಎಂ ಸಿದ್ದರಾಮಯ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಲೋಕೋಪಯೋಗಿ ಸಚಿವ ಎಚ್. ಸಿ. ಮಹದೇವಪ್ಪರನ್ನು ಕಣಕ್ಕಿಳಿಸಲು ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಶ್ರೀನಿವಾಸ್ ಪ್ರಸಾದ್ ಗೆ ಪ್ರಬಲ ಪ್ರತಿಸ್ಪರ್ಧಿ ಅಭ್ಯರ್ಥಿ ಸಿಗದ ಹಿನ್ನೆಲೆಯಲ್ಲಿ ಮಹದೇವಪ್ಪರನ್ನು ನಿಲ್ಲಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಅಂತ ಮೂಲಗಳು ತಿಳಿಸಿವೆ.
ಈ ಬಗ್ಗೆ ಹೈಕಮಾಂಡ್ಗೆ ಮಹದೇವಪ್ಪರನ್ನೇ ನಿಲ್ಲಿಸಲು ಅವಕಾಶ ನೀಡುವಂತೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ. ನಂಜನಗೂಡಿನಲ್ಲಿ ಮಹದೇವಪ್ಪ ಗೆದ್ದರೆ, ಟಿ ನರಸಿಪುರ ಕ್ಷೇತ್ರಕ್ಕೆ ರಾಜೀನಾಮೆ ನೀಡಲು 6 ತಿಂಗಳ ಕಾಲಾವಕಾಶ ಇರುತ್ತದೆ, ಆಗ ಉಪ ಚುನಾವಣೆ ನಡೆಯುವುದು ಸಾಧ್ಯತೆ ಕಡಿಮೆ ಎಂಬ ಲೆಕ್ಕಾಚಾರ ಸಿಎಂ ಸಿದ್ದರಾಮಯ್ಯರದ್ದು. ಹೀಗಾಗಿ ಮಹದೇವಪ್ಪ ಅವರನ್ನೇ ಅಭ್ಯರ್ಥಿ ಮಾಡಬೇಕೆಂದು ಸಿಎಂ ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದಾರೆ ಅಂತ ಗೊತ್ತಾಗಿದೆ.
