ಮೆಟ್ರೋ  ಪ್ರಯಾಣಿಕರೇ ಇತ್ತ ಗಮನಿಸಿ! 26 ಗಂಟೆಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ನಾಳೆ  ರಾತ್ರಿ 9 ಗಂಟೆಯಿಂದ ನಾಡಿದ್ದು ರಾತ್ರಿ 11 ರವರೆಗೂ ಸಂಚಾರ ಸ್ಥಗಿತವಾಗಲಿದೆ.  ಆರ್ ವಿ ರಸ್ತೆ ಸ್ಟೇಷನ್’ನಿಂದ ಯಲಚೇನಹಳ್ಳಿ ಸ್ಟೇಷನ್ ನಡುವೆ ಸಂಚಾರ ಸ್ಥಗಿತಗೊಳ್ಳಲಿದೆ. 

ಬೆಂಗಳೂರು (ಫೆ.23): ಮೆಟ್ರೋ ಪ್ರಯಾಣಿಕರೇ ಇತ್ತ ಗಮನಿಸಿ! 26 ಗಂಟೆಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ನಾಳೆ ರಾತ್ರಿ 9 ಗಂಟೆಯಿಂದ ನಾಡಿದ್ದು ರಾತ್ರಿ 11 ರವರೆಗೂ ಸಂಚಾರ ಸ್ಥಗಿತವಾಗಲಿದೆ. ಆರ್ ವಿ ರಸ್ತೆ ಸ್ಟೇಷನ್’ನಿಂದ ಯಲಚೇನಹಳ್ಳಿ ಸ್ಟೇಷನ್ ನಡುವೆ ಸಂಚಾರ ಸ್ಥಗಿತಗೊಳ್ಳಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೆಪಿನಗರ, ಬನಶಂಕರಿ ಕಡೆ ಪ್ರಯಾಣಿಸುವವರಿಗೆ ಮೆಟ್ರೋ ಇಲ್ಲದೇ ಸಮಸ್ಯೆಯಾಗಲಿದೆ. 26 ರ ಮುಂಜಾನೆ 5 ಗಂಟೆಗೆ ಮತ್ತೆ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ. ತುರ್ತು ಟ್ಯ್ರಾಕ್ ಕಾಮಗಾರಿ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದ್ದು ಪ್ರಯಾಣಿಕರ ‌ಅನುಕೂಲಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಆರ್’ಸಿಎಲ್ ಹೇಳಿದೆ.