ನಮ್ಮ ಮೆಟ್ರೊ ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ

Namma Metro First two entrances for women from March 1
Highlights

6 ಕೋಚ್'ಗಳು ಮೆಟ್ರೊಗೆ ಜೋಡಿಸಿದ ಬಳಿಕ ಮಹಿಳೆಯರಿಗೆ ಪ್ರತ್ಯೇಕ ಕೋಚ್ ಕಾಯ್ದಿರಿಸಲಾಗುವುದು. ಅಲ್ಲಿಯವರೆಗೆ ಪ್ರಾಯೋಗಿಕವಾಗಿ ಮುಂದಿನ ಕೋಚ್'ನ ಬಾಗಿಲಿನಲ್ಲಿ ಪ್ರವೇಶಿಸಲು ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಬಿಎಂಸಿಆರ್'ಎಲ್ ನಿರ್ದೇಶಕ ಮಹೇಂದ್ರ ಜೈನ್ ಹೇಳಿದ್ದಾರೆ.

ಬೆಂಗಳೂರು(ಫೆ.16): ಮೆಟ್ರೊ ಮಹಿಳಾ ಪ್ರಯಾಣಿಕರು ಬಹುದಿನಗಳ ಬೇಡಿಕೆ ಭಾಗಶಃ ಈಡೇರಿದಂತಾಗಿದೆ. ಹೌದು, ನಮ್ಮ ಮೆಟ್ರೊ ಮಹಿಳಾ ಪ್ರಯಾಣಿಕರಿಗೆ ಮುಂದಿನ ಕೋಚ್'ನ ಮೊದಲ ಎರಡು ಬಾಗಿಲಿನಲ್ಲಿ ಪ್ರವೇಶಿಸಲು ಹಾಗೂ ನಿರ್ಗಮಿಸಲು ಅವಕಾಶ ಕಾಯ್ದಿರಿಸಲಾಗಿದ್ದು, ಈ ನಿಯಮ ಮಾರ್ಚ್ 01 ರಿಂದ ಜಾರಿಯಾಗಲಿದೆ.

6 ಕೋಚ್'ಗಳು ಮೆಟ್ರೊಗೆ ಜೋಡಿಸಿದ ಬಳಿಕ ಮಹಿಳೆಯರಿಗೆ ಪ್ರತ್ಯೇಕ ಕೋಚ್ ಕಾಯ್ದಿರಿಸಲಾಗುವುದು. ಅಲ್ಲಿಯವರೆಗೆ ಪ್ರಾಯೋಗಿಕವಾಗಿ ಮುಂದಿನ ಕೋಚ್'ನ ಬಾಗಿಲಿನಲ್ಲಿ ಪ್ರವೇಶಿಸಲು ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಬಿಎಂಸಿಆರ್'ಎಲ್ ನಿರ್ದೇಶಕ ಮಹೇಂದ್ರ ಜೈನ್ ಹೇಳಿದ್ದಾರೆ.

ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ ಮೆಟ್ರೋದಲ್ಲಿ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಈ ವೇಳೆ ಮಹಿಳಾ ಪ್ರಯಾಣಿಕರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರು. ಇದೀಗ ಮೆಟ್ರೊ ತೀರ್ಮಾನ ಮಹಿಳಾ ಪ್ರಯಾಣಿಕರಿಗೆ ಕೊಂಚ ನಿರಾಳರನ್ನಾಗಿಸಿದೆ.  

loader