ಜಾಮೀನು ಪಡೆಯಲು ನಲಪಾಡ್ ಹೊಸ ಪ್ಲಾನ್; ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡ್ತಾರಾ ಹ್ಯಾರೀಸ್?

Nalapad New Plan to get Bail
Highlights

ಜಾಮೀನು ಪಡೆಯಲು  ನಲಪಾಡ್ ಹೊಸ ಟ್ವಿಸ್ಟ್ ನೀಡಿದ್ದಾನೆ.  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ‌ ತಂದೆ ಹ್ಯಾರಿಸ್’ಗೆ  ನಲಪಾಡ್ ಹೇಳಿದ್ದಾನೆನ್ನಲಾಗಿದೆ. 

ಬೆಂಗಳೂರು (ಮಾ.04): ಜಾಮೀನು ಪಡೆಯಲು  ನಲಪಾಡ್ ಹೊಸ ಟ್ವಿಸ್ಟ್ ನೀಡಿದ್ದಾನೆ.  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ‌ ತಂದೆ ಹ್ಯಾರಿಸ್’ಗೆ  ನಲಪಾಡ್ ಹೇಳಿದ್ದಾನೆನ್ನಲಾಗಿದೆ. 

ಪ್ರಭಾವಿ ವ್ಯಕ್ತಿಯ ಮಗ ಅಂತ ಜಾಮೀನು ಸಿಗುತ್ತಿಲ್ಲ. ಆದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹ್ಯಾರಿಸ್’ಗೆ ಸೂಚಿಸಿದ್ದಾನೆ.  ಜೈಲಿನಿಂದ ತಂದೆ ಹ್ಯಾರಿಸ್’ಗೆ ಪೋನ್ ಮಾಡಿದ ನಲಪಾಡ್ ಮುಂದೆ ಚುನಾವಣೆ ಸಹ ಬರ್ತಿದೆ.ಈಗ ರಾಜೀನಾಮೆ ಕೊಡು.  ನ್ಯಾಯಾಲಯದ ವಿಚಾರಣೆ ವೇಳೆ ಪ್ರಭಾವಿ ವ್ಯಕ್ತಿ ಅಂತ ಜಾಮೀನು ನಿರಾಕರಣೆಯಾಗುತ್ತಿದೆ. ನೀನು ರಾಜೀನಾಮೆ ನೀಡಿದ್ರೆ ಆಗ ನನಗೆ ಜಾಮೀನು ಸಿಗುತ್ತೆ ಎಂದು ನಲಪಾಡ್ ಹೇಳಿದ್ದಾನೆ.  ಸೆಷನ್ಸ್ ಕೋರ್ಟ್ ನಲ್ಲಿ ನಲಪಾಡ್

ಜಾಮೀನು ಅರ್ಜಿ ಮೂರು ಬಾರಿಯೂ ವಜಾಗೊಂಡ ಹಿನ್ನೆಲೆಯಲ್ಲಿ ಹೊಸ ಉಪಾಯ ಹುಡುಕಿದ್ದಾನೆ ನಲಪಾಡ್. ಹೈಕೋರ್ಟ್’ನಲ್ಲಾದ್ರು ಜಾಮೀನು ಪಡೆಯಲು ಕಸರತ್ತು ನಡೆಸುತ್ತಿದ್ದಾನೆ.  ಇನ್ನು ನಲಪಾಡ್ ಉಪಟಳ ಹೆಚ್ಚಾಗಿರುವುದರಿಂದ ಹೆಚ್ಚುವರಿ ಜೈಲು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಜೈಲಿನ ಉನ್ನತ ಮೂಲಗಳು ಸುವರ್ಣ ನ್ಯೂಸ್’ಗೆ ಮಾಹಿತಿ ನೀಡಿದ್ದಾರೆ. 
 

loader